Ad imageAd image

ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜ ಮಾಡುವುದನ್ನು ಖಂಡಿಸಿ ಪ್ರತಿಭಟನೆ

Bharath Vaibhav
ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜ ಮಾಡುವುದನ್ನು ಖಂಡಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಹುಕ್ಕೇರಿ: ಇಂದು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜ ಮಾಡುವುದನ್ನು ಖಂಡಿಸಿ ಎಂದು ರಾಲಿ ಮುಖಾಂತರ ಪ್ರತಿಭಟನೆ ಮಾಡಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಕೂಲಿ ಕಾರ್ಮಿಕ ಸಂಘಟನೆ ಹಿತಾಶಕ್ತಿ ಸಂಘಟನೆ ಹಾಗೂ ವಿವಿಧ ಸಂಘಟನೆ ಒಕ್ಕೂಟದೊಂದಿಗೆ ರಾಲಿ ಮುಖಾಂತರ ಪ್ರತಿಭಟನೆಯನ್ನು ಅಧಿಕೃತ ಅಭಿಯಂತವರ ಕಚೇರಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾನ ವೃತ್ತ ಹಿಡಕಲ್ ಡ್ಯಾಮ್ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಹುಕ್ಕೇರಿ ತಾಲೂಕಿನ ಹಲವು ಗ್ರಾಮಗಳಿಂದ ಸರಿಯಾಗಿ ಕುಡಿಯಲಿಕ್ಕೆ ನೀರು ಸಿಗುತ್ತಾ ಇಲ್ಲ ರೈತರಿಗೆ ಹೊಲಗದ್ದೆ ದನ ಕರಗಳಿಗೆ ನೀರು ಪೂರೈಸುತ್ತಿಲ್ಲ ಈ ರೀತಿ ನಮ್ಮ ಹುಕ್ಕೇರಿಯಲ್ಲಿ ರೈತ ಪರಿಸ್ಥಿತಿ ಇರುವಾಗ ನಾವು ಬೇರೆ ಜಿಲ್ಲೆಯಾದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಯಾವ ರೀತಿ ನೀರು ಪೂರೈಸಲು ಸಾಧ್ಯವಿಲ್ಲ ಹಿಡಿಕಲ್ ಡ್ಯಾಮ್ ಜಲಾಶಯದಿಂದ ನೀರು ಬಿಡಲು ಸಾಧ್ಯವಿಲ್ಲ ಬರುವುದಿಲ್ಲರಾದ ಎಂದು ಹಿರಿಯ ವಕೀಲರಾದ ಜೋಶಿ ಅವರು ಮಾಧ್ಯಮದೊಂದಿಗೆ ಹೇಳಲಾಯಿತು.

ಈ ಸಂದರ್ಭದಲ್ಲಿ ಶಶಿಕಾಂತ್ ನಾಯಕ್ ಮಾಜಿ ಸಚಿವರು, ಗೋಪಾಲ್ ಮರಬಸ್ನವರ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಯಾವಲ ಒಂಟುಮೂರಿ,ಪ್ರಭು ವಂಟಮುರಿ, ದುಂಡಪ್ಪ ಪಾಟೀಲ್, ರವಿ ಕಾಂಬಳೆ, ಶಾಂತಿನಾಥ ಮಗದುಮ್, ಲಕ್ಷ್ಮಿ ಜೋಡಹಟ್ಟಿ ಹಾಗೂ ಹಲವಾರು ರೈತ ಭಾಂದವರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!