Ad imageAd image

ಎಸ್ ಎಸ್ ಎಲ್ ಸಿ:  ಕಿತ್ತೂರ ಚನ್ನಮ್ಮನ ನಾಡು ಪ್ರಥಮ

Bharath Vaibhav
ಎಸ್ ಎಸ್ ಎಲ್ ಸಿ:  ಕಿತ್ತೂರ ಚನ್ನಮ್ಮನ ನಾಡು ಪ್ರಥಮ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ ವೈ ತುಬಾಕಿ ಅವರು ಮಾತನಾಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆಯಬೇಕು ಎಂಬ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ ವೈ ತುಬಾಕಿ ಅವರು ಒಂದು ಒಳ್ಳೆಯ ತಂಡವನ್ನ ರಚನೆ ಮಾಡಿ ಈ ತಂಡದಲ್ಲಿ ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರು ಶಿಕ್ಷಕಿಯರು ಎಲ್ಲರ ಜೊತೆ ಚರ್ಚೆ ಮಾಡಿ ಪೂನ್ ಇನ್ ಕಾರ್ಯಕ್ರಮ ಮಾಡಿದ್ದಿದೇವೆ ಮಕ್ಕಳ ಗುಣಮಟ್ಟದ ಫಲಿತಾಂಶ ಬರಲು ಎಲ್ಲಾ ಶಿಕ್ಷಕರು ಬಹಳಷ್ಟು ಶ್ರಮಿಸಿದ್ದಾರೆ ಮೊದಲು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಕಿತ್ತೂರು ತಾಲೂಕು ಒಳ್ಳೆಯ ಸ್ಥಾನ ಬರಬೇಕು ಎಂದು ನೀರಿಕ್ಷೆ ಮಾಡಲಾಗಿತ್ತು. ಅದರಂತೆ ಒಳ್ಳೆಯ ಫಲಿತಾಂಶ ಬಂದಿದೆ ಇದಕ್ಕೆ ಮೂಲ ಕಾರಣ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಮತ್ತು ಪಾಲಕರು ಶಾಸಕರ ನೇತೃತ್ವದಲ್ಲಿ ಹಲವಾರು ಅಭಿಪ್ರಾಯ ಕಾರ್ಯಗಹ ಮಾಡಲಾಗಿತ್ತು.

ಇನ್ನೂ ಮುಂದಿನ ದಿನಗಳಲ್ಲಿ ಇದರ ಕ್ಕಿಂತ ಹೆಚ್ಚು ಫಲಿತಾಂಶ ತರುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ಬಿವಿ ನ್ಯೂಸ್ ವರದಿಗಾರರಾದ ಬಸವರಾಜ ಭಿಮರಾಣಿ ಅವರು ಬೆಳಗಾವಿ ಡಿಡಿಪಿಐ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಡಿಡಿಪಿಐ ಲೀಲಾವತಿ ಹಿರೇಮಠ ಅವರು ಮಾತನಾಡಿ ನಿರಂತರವಾಗಿ ಒಂದ ಒಂದ ಅಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದರಿಂದ ಮತ್ತು ಎಲ್ಲಾ ಶಿಕ್ಷಕರು ಹಾಗೂ ಮುಖ್ಯಾಧ್ಯಾಪಕರು ಮತ್ತು ಬಹು ಮುಖ್ಯವಾಗಿ ಪಾಲಕರು ಸಹಕಾರ ದೊರರೆತ್ತರಿಂದ.
ಚನ್ನಮ್ಮನ ಕಿತ್ತೂರು ತಾಲೂಕು ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದಕ್ಕೆ ವಿಶೇಷವಾಗಿ ವಿನೂತನವಾಗಿ ಶೈಕ್ಷಣಿಕ ಪ್ರವಾಸಗಳು ಕಾರಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರ ತಂಡದವರಿಗೆ ಹಾಗೂ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು.

ವರದಿ : ಬಸವರಾಜ ಭಿಮರಾಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!