ಆಥಣಿ: ನಿಲಯ ಮೇಲ್ವಿಚಾರಕ ವಸತಿ ನಿಲಯದಲ್ಲಿ ತಾಯಿ ತಂದೆಯಂತೆ ಮಕ್ಕಳನ್ನು ನೋಡಿಕೊಳ್ಳಬೇಕು ಅಂದಾಗ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅಂತಹ ಮಾತೃ ಹೃದಯ ಮನೋಹರ ಬ್ಯಾಕೋಡ ಅವರಲ್ಲಿ ನಾನು ಕಂಡೆ ಎಂದು ಪತ್ರಕರ್ತ ರಾಜು ವಾಘಮಾರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಅಥಣಿ ಪಟ್ಟಣದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಹಮ್ಮಿಕೊಂಡ ಮೆಟ್ರಿಕ ಪೂರ್ವ ಬಾಲಕರ ವಸತಿಯ ನಿಲಯ ಮೇಲ್ವಿಚಾರಕ ಮನೋಹರ ಬ್ಯಾಕೋಡೆ ಹಾಗೂ ಬಿಳೇಗಾವ ವಸತಿನಿಲಯದ ಅಡುಗೆಯವರಾದ ಶಾಮಲಾದೇವಿ ಮಾಲಗತ್ತಿಮಠ ಇವರ ವಯೋನಿವೃತ್ತಿ ನಿಮಿತ್ಯ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮನೋಹರ ಬ್ಯಾಕೋಡ ಕಾರ್ಯನಿರ್ವಹಿಸುತ್ತಿದ್ದ ಅನಂತಪೂರದಲ್ಲಿ ಹಳೆಯ ವಿದ್ಯಾರ್ಥಿಯಾಗಿ ಅವರ ಮಾರ್ಗದರ್ಶನದಲ್ಲಿ ತಾವು ಬೆಳೆದ ಬಾಲ್ಯದ ವಿದ್ಯಾರ್ಥಿ ಜೀವನವನ್ನು ಅವರು ಸ್ಮರಿಸಿದರು.
ಸಭೆಯಲ್ಲಿ ಅತಿಥಿಯಾಗಿ ಭಾಗವಸಿದ ನಿಲಯ ಪಾಲಕ ಅಶೋಕ ಸತಿಗೌಡರ ಮಾತನಾಡುತ್ತ ಮನೋಹರ ಬ್ಯಾಕೋಡೆ ಅವರ ಸೇವಾ ಮನೋಭಾವ ನಮಗೆಲ್ಲರಿಗೂ ಮಾದರಿ ಎಂದರು.

ಮತ್ತೋರ್ವ ಅತಿಥಿಯಾದ ನಿಲಯ ಪಾಲಕಿ ಪಾರ್ವತೆವ್ವ ಮಲಗೌಡರ ಮಾತನಾಡುತ್ತ ಬ್ಯಾಕೋಡೆ ಇವರು ನಿಯಮಿತವಾಗಿ ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದರು.
ಮನೋಹರ ಬ್ಯಾಕೋಡೆ ಅವರು ಮಗುವಿನ ಮನಸ್ಸು ಹೊಂದಿದ್ದರು ಅವರ ನಿವೃತ್ತಿ ಜೀವನದ ಬದುಕು ಸುಖಮಯವಾಗಲಿ ಎಂದು ನಿಲಯ ಮೇಲ್ವಿಚಾರಕಿ ಗೀತಾ ನಾಯಿಕ ಅಭಿಮತ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೆಂಕಟೇಶ ಕುಲಕರ್ಣಿ ಮನೋಹರ ಬ್ಯಾಕೋಡೆ ಅವರ ವ್ಯಕ್ತಿತ್ವ, ಸಮಯಪ್ರಜ್ಞೆ, ಶಿಸ್ತುಬದ್ಧ ಜೀವನ ಇತತರಿಗೆ ಮಾದರಿ ಎಂದರು. ಇನ್ನೋರ್ವ ಬೀಳಕೊಡುತ್ತಿರುವ ಖಳೇಗಾವ ವಸತಿನಿಲಯದ ಅಡುಗೆಯವರಾದ ಶಾಮಲಾದೇವಿ ಮಾಲಗತ್ತಿಮತ ಮಕ್ಕಳಿಗೆ ಅವರ ಆರೈಕೆ ಮಾಡಿದ್ದು ಅವರ ಸೇವಾಮನೋಭಾವವನ್ನು ಇತರ ಕಿರಿಯ ನೌಕರರು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸೇವಾ ನಿವೃತ್ತಿ ಹೊಂದುತ್ತಿರುವ ಮನೋಹರ ಬ್ಯಕೋಡೆ ಹಾಗೂ ಶಾಮಲಾದೇವಿ ಮಾಲಗತ್ತಿಮಠ ಇವರ ನಿವೃತ್ತಿ ಜೀವನ ಸುಖಮಯವಾಗಲಿ, ಆರೋಗ್ಯಕರವಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕ ಅಶೋಕ ಅಜೂರ, ಮಹೇಶ ಗಾಡಿವಡ್ಡರ, ಪ್ರಥಮ ದರ್ಜೆ ಸಹಾಯಕ ರುದ್ರಗೌಡ ಭಾವಿಮನಿ, ಶ್ರೀಧರ ಘಾಟಗೆ, ಸಂಜು ಕೋರಿ ಸೇರಿದಂತೆ ಅನೇಕ ಸಿಬ್ಬಂದಿ ಉಪಸ್ಥಿತತರಿದ್ದರು.
ವರದಿ: ರಾಜು ವಾಘಮಾರೆ




