ಸಿರುಗುಪ್ಪ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ತರಗತಿ ಆರಂಭದ ಪ್ರಯುಕ್ತ ವಿದ್ಯಾರ್ಥಿಗಳನ್ನು ಪುಷ್ಪ ನೀಡುವುದರೊಂದಿಗೆ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಗಳಿಗೆ ಬರಮಾಡಿಕೊಳ್ಳಲಾಯಿತು.
ಪ್ರಾಂಶುಪಾಲರಾದ ಹೆಚ್.ನಾಗರಾಜ ಅವರು ಮಾತನಾಡಿ ಇಂದಿನಿಂದ ಕಾಲೇಜು ಆರಂಭವಾಗಿದ್ದು, ಈಗಾಗಲೇ ಕಳೆದ ಸಾಲಿನಲ್ಲಿ ಪ್ರಥಮ ಪಿಯುಸಿ ತೇರ್ಗಡೆಗೊಂಡಿರುವ ವಿದ್ಯಾರ್ಥಿಗಳು ದ್ವಿತಿಯ ಪಿಯುಸಿಗೆ ಜೂನ್ 10ನೇ ತಾರೀಖಿನೊಳಗೆ ದಾಖಲಾತಿ ಮಾಡಿಸಬೇಕು.

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇನ್ನೂ ಕಾಲಾವಕಾಶವಿರುತ್ತದೆ.
ಕೊರೋನಾ ಮಾರ್ಗಸೂಚಿಯಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುರಕ್ಷಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ಉನ್ನತೀಕರಿಸಿದ ಆದರ್ಶ ವಿಜ್ಞಾನ ಕಾಲೇಜಿನಲ್ಲಿ ಎಲ್ಲಾ ರೀತಿಯ ಪ್ರಯೋಗಾಲಯಗಳು, ಸುಸಜ್ಜಿತ ಕೊಠಡಿಗಳಿದ್ದು, ವಿದ್ಯಾರ್ಥಿಗಳು ದಾಖಲಾತಿ ಮಾಡಿಸಬೇಕೆಂದರು.
ಉಪನ್ಯಾಸಕರಾದ ಚಿದಾನಂದಪ್ಪ ಅವರು ಮಾತನಾಡಿ ನಮ್ಮ ಕಾಲೇಜಿನಲ್ಲಿ ನುರಿತ ಉಪನ್ಯಾಸಕರು, ಅನುಭವಿ ಆಡಳಿತ ಮಂಡಳಿಯಿಂದಾಗಿ ಕಲಾ, ವಾಣಿಜ್ಯ, ವಿಜ್ಞಾನ, ಡಿಪ್ಲೋಮಾ ವಿಷಯಗಳಿಗೂ ಅವಕಾಶವಿದ್ದು, ಖಾಸಗಿ ಶಾಲೆಗಳಿಗೂ ಮೀರಿದ ಉನ್ನತ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದರು.
ಇದೇ ವೇಳೆ ಉಪನ್ಯಾಸಕರಾದ ಸೋಮಶೇಖರರೆಡ್ಡಿ, ರಾಧಾ, ಮಲ್ಲಿಕಾರ್ಜುನ, ಮೌನೇಶ, ಚಂದ್ರಶೇಖರ, ಪಕ್ಕೀರಪ್ಪ, ಕಾಂತಣ್ಣ, ಕೊಟ್ರೇಶ ಹಾಗೂ ವಿದ್ಯಾರ್ಥಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ




