Ad imageAd image

ಘನವೆತ್ತ ರಾಜ್ಯಪಾಲರು, ಕರ್ನಾಟಕ ಸರ್ಕಾರ, ರಾಜಭವನ, ಬೆಂಗಳೂರು ಇವರಿಗೆ ತಾಲೂಕಾ ದಂಡಾಧಿಕಾರಿಗಳು ನಿಪ್ಪಾಣಿ ಇವರ ಮುಖಾಂತರ ಮನವಿ

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ :-  ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜು ಆವರಣದಲ್ಲಿ ನಡೆದ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ನೋಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಕುರಿತು ಮನವಿಯನ್ನೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಶಹರದಲ್ಲಿ ಸಲ್ಲಿಸಿದರು.

ಗುರುವಾರ ದಿನಾಂಕ 18-04-2024 ರಂದು ಹುಬ್ಬಳಿಯ ಬಿ.ವಿ.ಬಿ. ಕಾಲೇಜಿನ ಆವರಣದಲ್ಲಿ ಫಯಾಜ್ ಎಂಬ ದುಷ್ಕರ್ಮಿ ನಮ್ಮ ಸಮಾಜದ ಯುವತಿ ಕುಮಾರಿ ನೇಹಾ ಹಿರೇಮಠ ಅವಳನ್ನು ಹಾಡ ಹಗಲೆ ಬರ್ಬರವಾಗಿ ಹತ್ಯೆ ಮಾಡಿ ಅಮಾನವೀಯ ಕೃತ್ಯ ಎಸಗಿದ್ದಾನೆ ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಈ ಅಮಾನವೀಯ ಘಟನೆಯನ್ನು ತಾವುಗಂಭೀರವಾಗಿ ಪರಿಗಣಿಸಿ, ದುಷ್ಕರ್ಮಿಗೆ ಗಲ್ಲುಶಿಕ್ಷೆ ಆಗಬೇಕು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಕ್ರಮ ಕೈಕೊಳ್ಳಲು ತಾವು ಮಧ್ಯ ಪ್ರವೇಶ ವಹಿಸಿ ನೋಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.ವಂದನೆಗಳೊಂದಿಗೆ,ನಿಪ್ಪಾಣಿ ತಾಲೂಕಾ ಜಂಗಮ ಸಮಾಜ ಅಭಿವೃದ್ಧಿ ಸಂಘ ನಿಪ್ಪಾಣಿ ಇವರಿಂದ ಪ್ರತಿಭಟನೆ ನಡೆಸಿ ಮನವಿ ಯನ್ನೂ ತಹಶೀಲ್ದಾರ ಮುಜಫರ್ ಬಳಿಗಾರ್ ರವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಾಜದ ಗಣ್ಯರು,ಮುಖಂಡರು,ಹಿರಿಯರು, ಯುವಕರು ಉಪಸ್ಥಿತರಿದ್ದರು.

ವರದಿ:-ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!