ಸಿಂಧನೂರು :- 8 ನೇ ಅಕ್ಟೋಬರ್ 2024 ನಗರದಲ್ಲಿ ಆಯೋಜಿನಗೊಂಡಿದ್ದ ಕೃಷಿ ದಸರಾ ಕಾರ್ಯಕ್ರಮದ ಹಿನ್ನೆಲೆ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದರು ಡಿಸಿಎಂ ಜೊತೆ ಕೃಷಿ ಸಚಿವ ಚೆಲುವರಾಯಸ್ವಾಮಿ. ಸಲೀಂ ಅಹ್ಮದ್. ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು ಸರ್ಕ್ಯೂಟ್ ಹೌಸ್ ಬಳಿ ಸಿಂಧನೂರು ಐಕ್ಯ ಹೊರಾಟ ಸಮಿತಿ ಕಾರ್ಯಕರ್ತರು.
ಅಲ್ಲಮಪ್ರಭು ಪೂಜಾರ್. ಅಂಬ್ರುಸ್. ರಾಮಣ್ಣ ಗೋಮರ್ಸಿ. ಅಮರೇಶ್ ಗಿರಿಜಾಲಿ. ಯಲ್ಲಪ್ಪ ಯದ್ದಲದೊಡ್ಡಿ. ಆಲಂಬಾಷ್ ಬೂದಿಹಾಳ. ಒಳ ಮೀಸಲಾತಿ ಜಾರಿಗೊಳಿಸುವಂತೆ ಡಿ ಸಿ ಎಂ.ಗೇ ಘೆರಾವ್ ಹಾಕಿ ಘೋಷಣೆ ಕೂಗಿದರು ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರಿಗೆ ಮನವಿ ಕೊಡಲು ಅವಕಾಶ ಮಾಡಿಕೊಟ್ಟರು.
ನಂತರ ನಗರದ ಮಿನಿ ವಿಧಾನಸೌಧ ಕಾರ್ಯಾಲಯದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ವರೆಗೆ ಜೋಡೆತ್ತು. ಟ್ಯಾಕ್ಟರ್ ಬಂಡಿ. ನೇಗಿಲು. ಮೆರವಣಿಗೆ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ‘ದಸರಾ ಉತ್ಸವ ಸಮಿತಿ ಮತ್ತು ಗಂಜ್ ವರ್ತಕರು ಆಯೋಜಿಸಿರುವ ರೈತ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ನಾನು ಇವತ್ತು ಒಬ್ಬ ಡಿಸಿಎಂ ಅಥವಾ ಪಕ್ಷದ ಅಧ್ಯಕ್ಷ ಅಂತ ನಾನು ಇಲ್ಲಿಗೆ ಬಂದಿಲ್ಲ ಒಬ್ಬ ರೈತನ ಮಗನಾಗಿ ಬಂದಿದ್ದೇನೆ ಈ ಸಿಂಧನೂರಿನ ಐತಿಹಾಸಿಕ ದಸರಾ ಕಾರ್ಯಕ್ರಮಕ್ಕೆ ಬಂದಿದ್ದು ನನ್ನ ಭಾಗ್ಯ ಎಂದರು.
ಈ ಸಂದರ್ಭದಲ್ಲಿ – ಸಚಿವ ಶಿವರಾಜ್ ತಂಗಡಗಿ. ಶಾಸಕ ಹಂಪನಗೌಡ ಬಾದರ್ಲಿ. ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ.ಮಾಜಿ ಸಚಿವ ವೆಂಕಟಾವ್ ನಾಡಗೌಡ. ಮಾಜಿ ಸಂಸದ ಕೆ. ವಿರುಪಾಕ್ಷಪ್ಪ. ಮಸ್ಕಿ ಶಾಸಕ ಬಸನಗೌಡ ತುರುವಿಹಾಳ. ರಾಘವೇಂದ್ರ ಹಿಟ್ನಾಳ್. ಇನ್ನು ಅನೇಕರಿದ್ದರು..
ವರದಿ:- ಬಸವರಾಜ ಬುಕ್ಕನಹಟ್ಟಿ