ಗೋಕಾಕ : ಮೀನು ಹಿಡಿಯಲು ಹೊಗಿದ್ದ ಯುವಕ ನದಿಯಲ್ಲಿ ಮುಳುಗಿ ಸಾವಿಗಿಡಾದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ.ಮನೋಜ ಲಕ್ಷ್ಮಣ ನಾಯಕ (15) ವರ್ಷದ ಯುವಕ ಸಾವಿಗಿಡಾದ ಯುವಕ ಎಂದು ತಿಳಿದು ಬಂದಿದೆ,
ಕೊಣ್ಣೂರ ದುಪಧಾಳ ಸೇತುವೆ ಕೆಳಗಿರುವ ಘಟಪ್ರಭಾ ನದಿಯಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದ್ದಾಗ ಈಜಲು ಹೊಗಿದ್ದಾಗ ಮನೋಜ ಲಕ್ಷ್ಮಣ ನಾಯಕ (15) ಇತನಿಗೆ ಅಷ್ಟೊಂದು ಈಜು ಬರದ ಕಾರಣ ರಬಸದಿಂದ ಹರಿಯುತ್ತಿರುವ ನೀರಿನಲ್ಲಿ ಮುಳುಗಿ ಹೊಗಿದ್ದ , ಅಗ್ನಿ ಶ್ಯಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಹುಡುಕಾಟ ನಡೆಸಿದಾಗ ಮುಳುಗಿ ಹೊಗಿದ್ದ ಯುವಕ ಶವವಾಗಿ ಸಿಕ್ಕಿದ್ದಾನೆ.
ಇನ್ನು ಮೃತ ಯುವಕ ಕೊಣ್ಣೂರಿನ ರೇಲ್ವೆ ಸ್ಟೇಷನ್ (ಗೋಕಾಕ ರೋಡದ) ನಿವಾಸಿ ಎಂದು ತಿಳಿದು ಬಂದಿದ್ದು, ಮಗನ ಸಾವಿನಿಂದ ಕುಟುಂಬಸ್ಥರ, ಗೆಳೆಯರ ಅಕ್ರಂಧನ ಮುಗಿಲು ಮುಟ್ಟಿದೆ,
ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ, ಸಿಬ್ಬಂದಿಗಳು ಆಗಮಿಸಿ ಪರಿಶಿಲಿಸಿ ಪ್ರಕಾರಣ ದಾಖಲಿಸಿಕೊಂಡಿದ್ದಾರೆ.




