ಬೆಂಗಳೂರು: ಉತ್ತರ ಕರ್ನಾಟಕದ ಕೈ ಮಗ್ಗ ಪರಂಪರೆಯ ಸಂಕೇತವಾಗಿರುವ ಹಾಗೂ ವಿಶಿಷ್ಟ ಬಣ್ಣ,ಅಂಚಿರುವ ಪಟ್ಟೇದ ಸೀರೆಗೆ ಬೌಗೋಳಿಕ ಸಂಕೇತ ನೀಡಲಾಗಿದೆ.
ಇದರ ಟ್ಯಾಗ್ ಗಜೇಂದ್ರಗಡ ನೇಕಾರರ ಸಂಘಕ್ಕೆ ಸಿಕ್ಕಿದೆ. ಇದನ್ನು ರಾಮಯ್ಯ ಕಾಲೇಜ್ ಆಫ್ ಲಾ & ಸೆಂಟರ್ ಫಾರ್ ಇಂಟಲೆಕ್ಟುವಲ್ ಪ್ರಾಪರ್ಟಿ ರೈಟ್ಸ್ ಸಮ್ಮುಖದಲ್ಲಿ, ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಏಜೆನ್ಸಿಯಾಗಿರುವ ದಿ ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್‌ನಿಂದ ಜಿಐ ಟ್ಯಾಗ್‌ಗಳನ್ನು ನೋಂದಣಿ ಮಾಡಲಾಗಿದೆ.
ರಾಜ್ಯದ ಶ್ರೀಮಂತ ಜವಳಿ ಪರಂಪರೆಯನ್ನು ಸಂರಕ್ಷಿಸಲು ಮತ್ತು ಸಾಂಪ್ರದಾಯಿಕ ನೇಕಾರರನ್ನು ಪ್ರೋತ್ಸಾಹಿಸಲು ಜಿಐ ಟ್ಯಾಗ್ ಪ್ರಮುಖ ಪಾತ್ರ ವಹಿಸಲಿದೆ. ಬೆಳಗಾವಿ ಕುಂದ, ಕರದಂಟು ಸೇರಿ 50ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ದೊರಕಿಸಿಕೊಡುವಲ್ಲಿ ರಾಮಯ್ಯ ಕಾನೂನು ಕಾಲೇಜು ಕಾರ್ಯ ನಿರ್ವಹಿಸುತ್ತಿದೆ.