————————————-ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ
ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ದ್ವಿತೀಯ ಏಕದಿನ ಪಂದ್ಯ ಇಂದು ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ೩೦ ಓವರುಗಳಲ್ಲಿ ೪ ವಿಕೆಟ್ ಗೆ ೧೪೨ ರನ್ ಗಳಿಸಿತ್ತು.
ಇಂದು ಮಧ್ಯಾಹ್ನ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಪರವಾಗಿ ನಾಯಕ ಶುಭಮಾನ್ ಗಿಲ್ ೫೩ ಎಸೆತಗಳಲ್ಲಿ ೯ ಬೌಂಡರಿ, ೧ ಸಿಕ್ಸರ್ ನೆರವಿನಿಂದ ೫೬ ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾಗಲೇ ವಿಕೆಟ್ ಒಪ್ಪಿಸಿದರು. ರೋಹಿತ್ ರ್ಮಾ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ ಕೂಡ ಆಟಕ್ಕೆ ಹೊಂದಿಕೊಳ್ಳುವ ಲಕ್ಷಣಗಳನ್ನು ತೋರಿ ವಿಕೆಟ್ ಒಪ್ಪಿಸಿದ್ದು, ನಿರಾಶೆ ಮೂಸಿತು.




