ರಾಯಚೂರು:- ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಾಣ ದಳ ಗ್ರಾಮದಲ್ಲಿ ರಾಮದಾಸ್ ಎಂಬ ರೈತನ ಹೊಲದಲ್ಲಿ ನಾತ್ ಸೀಡ್ಸ್ ಕಂಪನಿಯ ರಾಣಾ 900ಬಿಜಿ 2 ಕಾಟನ್ ಹೈಬ್ರಿಡ್ ಸೀಡ್ಸ್ ಈಗಾಗಲೇ ರೈತರು ಹೊಲದಲ್ಲಿ ನಾಟಿ ಮಾಡಿ ಎರಡುವರೆ ತಿಂಗಳಾಗಿದ್ದು ಹೊಲಕ್ಕೆ ಬೋರ್ವೆಲ್ ಡ್ರಿಪ್ ಮೂಲಕ ಮತ್ತು ನೀರಿನ ಸಂಪೂರ್ಣ ಅನುಕೂಲವಿದ್ದರು ಪ್ರತಿಯೊಂದು ಸಾಲಿನಲ್ಲಿ 20ರಿಂದ 30 ಗಿಡಗಳು ಸಾಯುತ್ತಿದ್ದು
ಈ ರೈತನ ಹೊಲಗಳಿಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ಮತ್ತು ನಾತ್ ಸಿಡಿಸ್ ಕಂಪನಿಯ ಅಧಿಕಾರಿಗಳು ಯಾರು ರೈತರ ಹೊಲಗಳಿಗೆ ಭೇಟಿ ನೀಡುತ್ತಿಲ್ಲ ಬೆಳೆಯ ಹಾನಿಯಿಂದ ರೈತರು ಕಂಗಲಾಗುವ ಪರಿಸ್ಥಿತಿ ಉಂಟಾಗಿದ್ದು ಸಂಬಂಧಪಟ್ಟ ಕೃಷಿ ಆಯುಕ್ತರು ರಾಯಚೂರು ಜಂಟಿ ನಿರ್ದೇಶಕರು ಮತ್ತು ಸಹಾಯಕ ಕೃಷಿ ನಿರ್ದೇಶಕರಿಗೆ ಮತ್ತು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಮಾಧ್ಯಮದ ಮುಖಾಂತರ ರೈತರ ವಿನಂತಿಸಿಕೊಳ್ಳುತ್ತಿದ್ದೇವೆ
ಈಗಲಾದರೂ ಸಂಬಂಧಪಟ್ಟ ರಾಯಚೂರು ಜಂಟಿ ನಿರ್ದೇಶಕರು ಸಹಾಯಕ ಕೃಷಿ ನಿರ್ದೇಶಕರು ಮತ್ತು ಗಿಲ್ಲೆಸೂಗೂರ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ರೈತರಿಗೆ ಯಾವ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು ಅನ್ನುವುದನ್ನು ತಿಳಿಸಿ ಮಾಹಿತಿ ನೀಡಿ ರೈತರ ಬೆಳೆಯನ್ನು ಉಳಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಾರೋ ಇಲ್ಲವೋ ಅನ್ನುವುದನ್ನು ಕಾದುನೋಡಬೇಕಾಗಿದೆ
ವರದಿ:-ಗಾರಲದಿನ್ನಿ ವೀರನಗೌಡ