ಬಾಗಲಕೋಟೆ : ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ 4 ನೇ ತರಗತಿ ವಿದ್ಯಾರ್ಥಿ ಜೀವನ ಜಂಬಗಿ ಅವರು ಗಿಲ್ಲಿ ನಟ ಗೆಲುವು ಸಾಧಿಸಿದರೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಚಾಕ್ಲೇಟ್ ವಿತರಣೆ ಮಾಡುತ್ತೇನೆ ಎಂದು ದೇವರಿಗೆ ಬೇಡಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಸಾವಳಗಿ ಯಲ್ಲಿ ಚಾಕ್ಲೆಟ್ ವಿತರಿಸಿ ಸಂಭ್ರಮಿಸಿದರು.

ನಂತರ ಮಾತನಾಡಿದ ವಿದ್ಯಾರ್ಥಿ ಕಲರ್ಸ ಕನ್ನಡ ಚಾನೆಲನಲ್ಲಿ ಪ್ರಸಾರವಾಗುವ ಬಿಗಬಾಸ ಸಿಸಿನ್ – 12 ರ ಸ್ಪರ್ಧಿ ಗಿಲ್ಲಿ ನಟ ಒಬ್ಬ ಹಳ್ಳಿಯ ಹುಡುಗ ಇವನ ಪ್ರತಿಭೆ ಮೂಲಕ ನಾಡಿನ ಜನರ ಮನ ಗೆದ್ದು ವಿನ್ನರ ಆಗಿದ್ದು ಸಂತಸ ತಂದಿದೆ ಎಂದು ಹೇಳಿದರು.
ವರದಿ :ಅಜಯ ಕಾಂಬಳೆ




