Ad imageAd image

ನಾಡು ಬಂಗಾರದ ಗಿಂಡಿ ನಾಡು ಸಿರಿಯಾದಿತಲೇ ಪರಾಕ್’ : ಗೊರವಯ್ಯ ಕಾರಣಿಕ

Bharath Vaibhav
ನಾಡು ಬಂಗಾರದ ಗಿಂಡಿ ನಾಡು ಸಿರಿಯಾದಿತಲೇ ಪರಾಕ್’ : ಗೊರವಯ್ಯ ಕಾರಣಿಕ
WhatsApp Group Join Now
Telegram Group Join Now

ಹಾವೇರಿ: ‘ನಾಡು ಬಂಗಾರದ ಗಿಂಡಿ ನಾಡು ಸಿರಿಯಾದಿತಲೇ ಪರಾಕ್’ ಎಂದು ವಿಜಯದಶಮಿಯಂದು ದೇವರಗುಡ್ಡದ ಗೊರವಯ್ಯ ಕಾರಣಿಕ ನುಡಿದಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಸುಕ್ಷೇತ್ರ ದೇವರಗುಡ್ಡದ ಗೊರವಯ್ಯ ಕಾರಣಿಕ ನುಡಿದಿದ್ದಾರೆ. ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಭವಿಷ್ಯವಾಣಿ ನುಡಿಯಲಾಗಿದೆ.

ನಾಡಿನಾದ್ಯಂತ ಪ್ರಸಕ್ತ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಬರಲಿದೆ. ಹಿಂಗಾರು ಬೆಳೆ ಸಮೃದ್ಧವಾಗಿ ಬರಲಿದೆ ಎಂದು ದೈವ ವಾಣಿಯನ್ನು ವಿಶ್ಲೇಷಿಸಲಾಗಿದೆ.

ರಾಜಕೀಯವಾಗಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ಹೊರಹೊಮ್ಮುತ್ತಾರೆ.

ಪ್ರಸ್ತುತ ವರ್ಷದ ದೈವವಾಣಿ ನುಡಿದಿರುವ ನಾಗಪ್ಪ ಉರ್ಮಿ ಗೊರವಯ್ಯ ಒಂಬತ್ತು ದಿನ ಉಪವಾಸ ವ್ರತ ಮಾಡಿ 18 ಅಡಿ ಎತ್ತರದ ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ. ಕಾರಣಿಕವನ್ನು ವರ್ಷದ ಭವಿಷ್ಯವಾಣಿ ಎಂದೇ ಹೇಳಲಾಗುತ್ತದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!