Ad imageAd image

ಲ್ಯುಡೊ ಆಟದ ಕಾಯ್ನ್ ನುಂಗಿ ಬಾಲಕಿ ಸಾವು 

Bharath Vaibhav
ಲ್ಯುಡೊ ಆಟದ ಕಾಯ್ನ್ ನುಂಗಿ ಬಾಲಕಿ ಸಾವು 
WhatsApp Group Join Now
Telegram Group Join Now

ಉಳ್ಳಾಲ: ಮನೆಯಲ್ಲಿ ಲ್ಯುಡೊ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಬಾಲಕಿ ಆಟಕ್ಕೆ ಬಳಸುವ ಶಂಕಾಕೃತಿಯ ಪ್ಲಾಸ್ಟಿಕ್ ಕಾಯ್ನ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ನಡೆದಿದೆ.

ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕಾ ಮೃತ ದುರ್ದೈವಿ.

ತನುಷ್ಕಾ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು ಉದ್ಯೋಗಕ್ಕೆ ತೆರಳಲು ಅನುಕೂಲವಾಗುವಂತೆ ಕೊಲ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶನಿವಾರ ಮಧ್ಯಾಹ್ನ ಶಾಲೆಗೆ ರಜೆ ಕಾರಣ ತನುಷ್ಕಾ ಅಣ್ಣ ಮತ್ತು ತಂಗಿಯರ ಜೊತೆ ಆಟವಾಡುತ್ತಿದ್ದಾಗ, ಪ್ಲಾಸ್ಟಿಕ್ ಕಾಯ್ನ್ ಅನ್ನು ನುಂಗಿದ್ದಾಳೆ. ಏಕಾಏಕಿ ಉಸಿರುಗಟ್ಟಿದಾಗ ತಕ್ಷಣ ಆಕೆಯನ್ನು ಸ್ಥಳೀಯ ಸಹಕಾರದೊಂದಿಗೆ ತೊಕ್ಕೊಟ್ಟಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ತನುಷ್ಕಾ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!