ಮುದಗಲ್ಲ:-ಹಳೆಪೇಟೆಯ ವಾರ್ಡ ನಂಬರ್ 1 ಹಾಗೂ ವಾರ್ಡ :- 2 ರಲ್ಲಿ ವಾಸಿಸುವ ನಿವಾಸಿ ಗಳಿಗೆ ಕಳೆದ ಒಂದುವರೆ ತಿಂಗಳುಗಳಿಂದ ಹಳೇಪೇಟೆಯ ಕೆರೆಯ ಸುತ್ತ-ಮುತ್ತಲು ಇರುವ ಸುಮಾರು 50-60 ಮನೆಗಳಿಗೆ ಸಂಜೆ ಯಾಗುತ್ತಿದ್ದಂತೆ ಸಣ್ಣ-ಸಣ್ಣ ಹುಳುಗಳು ಹಾಗೂ ಸೊಳ್ಳೆಗಳ ಕಾಟ ವೀಪರೀತವಾಗಿದ್ದು ಮನೆಯಲ್ಲಿ ಬಾಗಿಲನ್ನು ತೆರೆದರೆ ಸಾಕು ಮನೆಯಲ್ಲಿ ಎಲ್ಲಾ ಕಡೆ ಹುಳುಗಳ ಪ್ರವೆಶ ಮಾಡಿ ಉಟದಲ್ಲಿ, ಸಣ್ಣ ಮಕ್ಕಳ ಬಾಯಲ್ಲಿ ಹಾಗೂ ಸಣ್ಣ ಮಕ್ಕಳಿಗೆ ಮೈಯೆಲ್ಲಾ ಬೊಬ್ಬೆ ಯಾಗುವ ರೀತಿ ಕಚ್ಚುತ್ತವೆ.
ಅಷ್ಟೆ ಅಲ್ಲಾ ಸಂಜೆ ಕೆರೆಯ ಪಕ್ಕ ಬೈಕ ತೆಗೆದು ಕೊಂಡು ಹೋದರೆ ಸಾಕು ಬಾಯಿ ಮೂಗು ಎನ್ನದೇ ಎಲ್ಲಂದರಲ್ಲಿ ಸಣ್ಣ ಹುಳುಗಳು ಕಾಟ ಹೆಚ್ಚಾಗುತ್ತದೆ ಇದರಿಂದ ಹಳೇಪೇಟೆಯ ವಾಸಿಸುವ ಜನಗಳಿಗೆ ತುಂಬಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಈಗಾಗಲೇ ಕರ್ನಾಟಕದಾದ್ಯಂತ ಡೆಂಗ್ಯೂ ಜ್ವರಗಳು ಉಲ್ಟಣ ಗೊಂಡಿರುವ ಗಮನದಲ್ಲಿ ಇರಬಹುದು. ಇದೇ ರೀತಿ ಈ ಹುಳುಗಳು ಕಡಿಮೆಯಾಗುವ ರೀತಿ ಪುರಸಭೆ ವತಿಯಿಂದ ಸೂಕ್ತಕ್ರಮ ವಹಿಸಬೇಕು ಕ್ರಮ ವಹಿಸದೇತ ಹೋದರೆ ಮುಂದಿನ ಆರೋಗ್ಯ ಸಮಸ್ಯೆಗಳಿಗೆ ನೇರವಾಗಿ ಹೊಣೆಯಾಗ ಬೇಕಾಗಿರುತ್ತದೆ
ಆದ್ದರಿಂದ ಆದಷ್ಟು ಬೇಗ ಈ ಹುಳುಗಳ ಕಾಟದಿಂದ ನಮ್ಮ ಮಕ್ಕಳ ಹಾಗೂ ಹಿರಿಯರ ಆರೋಗ್ಯವನ್ನು ಕಾಪಡುವ ದೃಷ್ಠಯಿಂದ ತಾವುಗಳು ಇದಕ್ಕೆ ಸೂಕ್ತ ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಳೇಪೇಟೆಯ ವಾಡ್೯ ನಂಬರ್ 1 ಹಾಗೂವಾಡ೯ನಂಬರ್ :- 2 ರ ನಿವಾಸಿ ಗಳಾದ ಮಹೇಶ್ ಪ್ರಶಾಂತ್ ,ಶಾಂತಮ್ಮ,ಬಸಯ್ಯ ,ಮಹಾಂತೇಶ ,ಮಂಜುನಾಥ , ಗುರುಬಸಪ್ಪ ,ಅವರು ಪುರಸಭೆ ಮುಖ್ಯಾಧಿಕಾರಿ ಯಾದ ನಭಿಸಾಬ ಕಂದಗಲ್ಲ ಅವರಿಗೆ ಮನವಿ ಪತ್ರ ಸಲ್ಲಿಸಿದರು..
ವರದಿ:- ಮಂಜುನಾಥ ಕುಂಬಾರ