ಚಿಟಗುಪ್ಪ : ಮುಂದಿನ ಪೀಳಿಗೆಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಗುಂಡಪ್ಪ ಹುಡಗೆ ತಮ್ಮ ಹಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಚಿಟಗುಪ್ಪ ಪಟ್ಟಣದ ಸಂತ ಶಿರೋಮಣಿ ಮಾಡಿವಾಳೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಪ್ರೌಢ ಶಾಲೆ ಚಿಟಗುಪ್ಪ 2005-6ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಗುಂಡಪ್ಪ ಹುಡಗೆ ಮಾತನಾಡಿದರು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧಗಳು ಕಳೆದು ಹೋಗುತ್ತಿದೆ.ಆದರೆ ವಿದ್ಯಾರ್ಥಿಗಳು ಗುರುಗಳನ್ನು ನೆನಪಿಸಿ ಗೌರವಿಸಿದ್ದು ಹಳೆ ನೆನಪುಗಳು ಮತ್ತೆ ನೆನಪಿಸಿದಂತಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಕಾಶಿನಾಥ ಕೊಡ್ಲಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳಿಂದ ಗುರು ವಂದನಾ ಮಾಡಿದ್ದು ಹೆಮ್ಮೆ ಪಡುವಂತಿದೆ.
ಗುರುಗಳಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ಗುರುಗಳ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಉರ್ದು ಶಿಕ್ಷಕ ಕುತ್ತೋದಿನ್ ಕಮಠಾಣವಾಲೇ,ಎಂ ಎಂ ಮಾಸುಲ್ದಾರ,ಶಾಂತಪ್ಪ,ರೇವಣಸಿದ್ದಪ್ಪ, ಚಂದ್ರಶೇಖರ ದಾನಪ್ಪ,ಅಮೃತಾಂಜಲಿ,ಜೈಶ್ರೀ, ಕಾಂತಾಬಾಯಿ,ಕಾಶೀನಾಥ್ ಸ್ವಾಮಿ,
ಹಳೆ ವಿದ್ಯಾರ್ಥಿಗಳಾದ ಪ್ರದೀಪಕುಮಾ,ಅನೀಲ ಉಪಾರ್,ಲಕ್ಷ್ಮಣ್ ಭೋವಿ,ಯುವರಾಜ ಪಾಟೀಲ್,ಸಂತೋಷರೆಡ್ಡಿ ಈರಾರೆಡ್ಡಿ,ವಾಹಿದ್ ಪಟೇಲ್,ದತ್ತು ಮುಸ್ತರಿ,ದೀಪಿಕಾ ರೆಡ್ಡಿ,ಲಕ್ಷ್ಮಿ ಚಂದನಕೇರಾ,ಆಶ್ವಿನಿ,ಗೀತಾ,ವಂದನಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಸಜೀಶ ಲಂಬುನೋರ್




