ಅರಸೀಕೆರೆ: ನಗರದ ಎಸ್ಎಂಜೆ ಸಮುದಾಯ ಭವನದಲ್ಲಿ ಗ್ಲೂಬಲ್ ಫ್ರೀ ಸ್ಕೂಲ್ ಮೊದಲ ವಾರ್ಷಿಕೋತ್ಸವ ಸಮಾರಂಭವು ಅದ್ದೂರಿಯಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಸ್ಕೂಲ್ ನ ಸಣ್ಣ ಸಣ್ಣ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೌಲಾನಾ ಫಾಜೀಲ್ ರಜ್ವೀ ರವರು ವಿಶೇಷ ಪ್ರವಚನನ್ನು ನೀಡಿದರು ಇವರ ಜೊತೆ ಸುನಿ ಜಾಮಿಯಾ ಮಸೀದಿಯ ಧರ್ಮಗುರುಗಳು ಹಾಗೂ ನಗರದ ಅನೇಕ ಧರ್ಮ ಗುರುಗಳು ಉಪಸ್ಥಿತರಿದ್ದರು.
ಮತ್ತು ಸ್ಥಳೀಯ ಶಾಸಕ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡರು, ಹಾಗೂ ನಗರ ಪ್ರಾಧಿಕಾರ ಅಧ್ಯಕ್ಷರಾದ ಅರುಣ್ ಕುಮಾರ್ ಅವರು ವಿಶೇಷ ಆಥಿತಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಲೋಬಲ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಎಸ್ ಎಂ ಜೆ ಕಮಿಟಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.
ವರದಿ:ರಾಜು ಅರಸೀಕೆರೆ




