ಅರಸೀಕೆರೆ: ನಗರದ ಹುಳಿಯಾರು ರಸ್ತೆಯಲ್ಲಿರುವ ಎಸ್ ಎಂ ಜೆ ಸಮುದಾಯ ಭವನದಲ್ಲಿ ಗ್ಲೂಬಲ್ ಫ್ರೀ ಸ್ಕೂಲ್ ಎರಡನೇ ವಾರ್ಷಿಕೋತ್ಸವ ಸಮಾರಂಭವು ಅದ್ದೂರಿಯಾಗಿ ನಡೆಸಲಾಯಿತು. ಕಾರ್ಯಕ್ರಮವನ್ನು ಗ್ಲೋಬಲ್ ಸ್ಕೂಲ್ ಸಂಸ್ಥಾಪಕರಾದ ಅನ್ವರ್ ಸಾದಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಎಂ ಸಮಿಉಲ್ಲಾ ರವರು ಉದ್ಘಾಟಿಸಿ ಮಾತನಾಡಿ ಪೋಷಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮವಾದ ಶಿಕ್ಷಣ ಒದಗಿಸಬೇಕು ಮತ್ತು ಮಕ್ಕಳು ಉತ್ತಮ ಪ್ರಜೆಯಾಗಿ ಬೆಳೆಯಲು ಸಹಕರಿಸಬೇಕೆಂದು ಪೋಷಕರನ್ನು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸ್ಕೂಲ್ ನ ಸಣ್ಣ ಸಣ್ಣ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೌಲಾನಾ ಹಾಫೀಜ್ ಅಕಿಲ್ ಸಾಬ್ ರವರು ವಿಶೇಷ ಪ್ರವಚನವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಇಸ್ಲಾಮಿಯ ಬೈತುಲ್ಮಾಲ್ ಕಮಿಟಿ ಅಧ್ಯಕ್ಷರಾದ ಮೆಹಬೂಬ್, ಮಾಜಿ ಅಧ್ಯಕ್ಷರಾದ ಅಪ್ಸರ್ ಪಾಷಾ, ಹಾಸನ ವಾಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ಸೈಯದ್ ಸಿಕಂದರ್, ಸಮಾಜ ಸೇವಕರಾದ ಅಮ್ಜದ್ ಪಾಷಾ, ಸುಲ್ತಾನೂಲ್ ಹಿಂದ್ ಟ್ರಸ್ಟ್ ಅಧ್ಯಕ್ಷರಾದ ಕೌಸರ್ ಪಾಷಾ,ಸುನ್ನಿ ದಾವತೇ ಇಸ್ಲಾಮಿ ಮುಖ್ಯಸ್ಥರಾದ ಫರಹತ ಅಲಿ, ಸೈಯದ್ ಸಲ್ಮಾನ್, ಗ್ಲೋಬಲ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮೊಹಮ್ಮದ್ ಅತವುಲ್ಲಾ, ಕಾರ್ಯದರ್ಶಿ ಪರ್ವಿಜ್ ಅಹ್ಮದ್, ಖಜಾಂಚಿ ನವಾಜ್ ಪಾಶ, ಸೈಯದ್ ತೌಸಿಪ್ , ಫರಾಜ್ ಪಾಷಾ, ಅಮ್ಜದ್ ಪಾಷಾ, ಹಾಗೂ ಸರ್ವ ಸದಸ್ಯರು, ಮಕ್ಕಳ ಪೋಷಕರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.
ವರದಿ : ರಾಜು ಅರಸೀಕೆರೆ




