Ad imageAd image

ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗುರುಪೂರ್ಣಿಮೆ: ಹೂವುಗಳು ಹಾಗೂ ಹಣ್ಣುಗಳಿಂದ ವೈಭವದ ಸಿಂಗಾರ

Bharath Vaibhav
ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗುರುಪೂರ್ಣಿಮೆ: ಹೂವುಗಳು ಹಾಗೂ ಹಣ್ಣುಗಳಿಂದ ವೈಭವದ ಸಿಂಗಾರ
WhatsApp Group Join Now
Telegram Group Join Now

ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗುರುಪೂರ್ಣಿಮೆ: ಹೂವುಗಳು ಹಾಗೂ ಹಣ್ಣುಗಳಿಂದ ವೈಭವದ ಸಿಂಗಾರ

 

ಬೆಂಗಳೂರು, ಜುಲೈ 21: ವಿಶೇಷ ಅಲಂಕಾರಕ್ಕೆ ಹಾಗೂ ಪೂಜೆಗೆ ಪ್ರಸಿದ್ದಿಯಾಗಿರುವ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವಿಶೇಷವಾಗಿ ಗುರುಪೂರ್ಣಿಮೆ ಆಚರಿಸಲಾಯಿತು. ಹೂವು ಹಾಗೂ ಹಣ್ಣಿನಿಂದ ವಿಶೇಷ ಆಲಂಕಾರ ಮಾಡಲಾಗಿತ್ತು ಹಾಗೂ ಬೆಳಿಗ್ಗೆ 7 ಗಂಟೆಯಿಂದ ವಿಶೇಷ ಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು.

ಪ್ರತಿವರ್ಷದಂತೆ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಯಿತು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾಬಾರ ‘’ಸಬ್ ಕಾ ಮಾಲೀಕ್ ಏಕ್ ಹೇ’’ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು ವಿವಿಧ ಹಣ್ಣುಗಳು, ವಿಶೇಷ ಹೂವುಗಳಿಂದ ದೇವಸ್ಥಾನವನ್ನು ಆಲಂಕರಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಲೋಕರಾಜು ತಿಳಿಸಿದರು.  

 

ಅಭಿಷೇಕ, ಆಲಂಕಾರ, ಸಾಯಿ ಮಂತ್ರ ಹೋಮ, ಸುದರ್ಶನ ಹೋಮ, ದತ್ತಾತ್ರೇಯ ಹೋಮ ಸೇರಿದಂತೆ ಇನ್ನಿತರ ಪೂಜೆಗಳನ್ನು ಆಯೋಜಿಸಲಾಗಿತ್ತು, ಸಾವಿರಾರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಪಡೆದುಕೊಂಡರು ಎಂದು ಟ್ರಸ್ಟಿಗಳಾದ ಧನರಾಜು, ಆನಂದರಾಜು ತಿಳಿಸಿದರು.

 

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!