Ad imageAd image

ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ವೈಭವಯುತ ರಥೋತ್ಸವ

Bharath Vaibhav
ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ವೈಭವಯುತ ರಥೋತ್ಸವ
WhatsApp Group Join Now
Telegram Group Join Now

ಸಿರುಗುಪ್ಪ : -ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ದವನದ(ಹಂಪಿ) ಹುಣ್ಣಿಮೆ ನಿಮಿತ್ತ ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ರಥೋತ್ಸವವು ವಿವಿಧ ವಾದ್ಯಗಳ ನಾದದೊಂದಿಗೆ ಗ್ರಾಮದ ವೈಭವಯುತವಾಗಿ ಜರುಗಿತು.

ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಹೋಮಹವನಗಳು ಜರುಗಿದ್ದು, ಶ್ರೀ ಮರಿಬಸವಲಿಂಗಸ್ವಾಮಿಯ ಮೂರ್ತಿಗೆ ಪಂಚಾಮೃತಾಭಿಷೇಕ ಮಾಡಿ ಫಲಪುಷ್ಪಗಳು, ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರತಿ ವರ್ಷಕೊಮ್ಮೆ ನಡೆಯುವ ಜಾತ್ರಾ ನಿಮಿತ್ತ ಗ್ರಾಮದ ಎಲ್ಲಾ ಮನೆಗಳಲ್ಲಿ ಶ್ರೀ ಹನುಮಾನ್ ಜಯಂತಿ ಮತ್ತು ರಥೋತ್ಸವದ ಸಂಭ್ರಮ ಕಂಡುಬಂದಿತು. ಭಕ್ತರು ದೇವಸ್ಥಾನದಲ್ಲಿ ಎಡೆ ನೈವೇದ್ಯ ಅರ್ಪಿಸಿ ರಥಕ್ಕೆ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.

 

ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಮದ ಕೆಲವು ಮನೆಗಳಲ್ಲಿ ಹಸಿರು ಮತ್ತು ಕಂದು ಬಣ್ಣದಿಂದ ಕೂಡಿದ ಹಾಗೂ ನಿಧಾನಗತಿಯಲ್ಲಿ ಸಾಗುತ್ತಿರುವ ಚಿಕ್ಕದಾದ ಹಾವಿನ ಮರಿಗಳು ಹೆಚ್ಚಾಗಿ ಕಂಡುಬಂದ ನಂತರ ಗ್ರಾಮಸ್ಥರು ಕೆಲವು ಪಂಡಿತರಲ್ಲಿ ವಿಚಾರಿಸಿದಾಗ ಅವುಗಳನ್ನು ಹೊಡೆಯಬಾರದು, 21 ದಿನಗಳ ಕಾಲ ಪೂಜೆ ಸಲ್ಲಿಸಿ ಲಿಂಗೈಕ್ಯಗೊಂಡ ನಂತರ ಗದ್ದುಗೆಯೊಳಗೆ ಬಿಡಬೇಕೆಂದು ಸಲಹೆ ನೀಡಿದ್ದರು.

ಅದರಂತೆ ಗ್ರಾಮಸ್ಥರು ಗದ್ದುಗೆ ಸ್ಥಾಪಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದರಿಂದ ಗ್ರಾಮಕ್ಕೆ ಒಳಿತಾಗಿದೆ. ಕಾಲಕ್ರಮೇಣ ಉಟಕನೂರು ಶ್ರೀ ಮರಿಬಸವಲಿಂಗ ತಾತನವರ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆಂದು ಗ್ರಾಮಸ್ಥರು ತಿಳಿಸಿದರು.

ಸಾಯಂಕಾಲ 6ಕ್ಕೆ ಆರಂಭವಾಗುವ ರಥೋತ್ಸವದಲ್ಲಿ ಎಲ್ಲಾ ಜನಾಂಗದವರು ಭಾಗಿಯಾಗಿ ಶ್ರೀ ಎದುರು ಬಸವಣ್ಣ ದೇವಸ್ಥಾನದವರೆಗೆ ರಥವನ್ನು ಎಳೆದೊಯ್ಯುವ ಭಕ್ತರು ನಂತರ ದೇವಸ್ಥಾನ ಪಕ್ಕದಲ್ಲಿ ಸಮಾಪ್ತಿಗೊಂಡಿತು.

ವರದಿ ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!