ಗೋಕಾಕ : ತಿರುವು ತಪ್ಪಿಸಲು ಹೋಗಿ ನಿಂತಿದ್ದ ವಿದ್ಯುತ್ ಕಂಬಕ್ಕೆ ಚಲಿಸುತಿದ್ದ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಣಾಮ ಕಂಬ ಮುರಿದ ಘಟನೆ ಗೋಕಾಕದಲ್ಲಿ ನಡೆದಿದೆ.
ಗೋಕಾಕ ನಗರದ ವಿದ್ಯಾನಗರದಲ್ಲಿ ಬಸವ ಮಂಟಪದಲ್ಲಿ ಸಮಾರಂಭವೊಂದರಲ್ಲಿ ಬಾಗಿಯಾಗಿ ಮುಗಿಸಿಕೊಂಡು ತಮ್ಮ ಸ್ವಂತ ಊರು ಹುಬ್ಬಳ್ಳಿಗೆ ಮರಳಿ ಹೊಗುವಾಗ ರಸ್ತೆ ಮದ್ಯ ವಾಹನಗಳು ನಿಂತಿದ್ದವು,ಅವುಗಳ ದಾಟಿಸಲು ತಿರುಗುವಾಗ ಚಾಲಕನ ನಿರ್ಲಕ್ಷತನದಿಂದ ನಿಂತಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ಹೊಗಿ ಶಾರ್ಟ್ ಶರ್ಕಿಟ್ ಆಗಿ ಚಾಲಕನ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತಕ್ಷಣ ಅಲ್ಲಿಯೆ ಇದ್ದ ಸಾರ್ವಜನಿಕರು ಕಂಬ ಕಾರ ಮೇಲೆ ಬಿಳಬಹುದು ಎಂದು ಕಾರ ಚಾಲಕನನ್ನು ರಕ್ಷಿಸಿದ್ದಾರೆ,ಕಂಬಕ್ಕೆ ಗೈ ವಾಯರ ಇರುವುದರಿಂದ ಅದೃಷ್ಟಾವಶ ಶಾರ್ಟ ಸರ್ಕಿಟನಿಂದ ಯಾವುದೇ ರೀತಿಯ ಪ್ರಾಣಾಪಾಯ ಉಂಟಾಗಿಲ್ಲ.
ವರದಿ:ಮನೋಹರ ಮೇಗೇರಿ