Ad imageAd image

ವಿಶೇಷ ವಾದ್ಯಗಳೊಂದಿಗೆ ಜರುಗಿದ ದೇವಿ ಅನ್ನಪೂರ್ಣೇಶ್ವರಿ ಉತ್ಸವ

Bharath Vaibhav
ವಿಶೇಷ ವಾದ್ಯಗಳೊಂದಿಗೆ ಜರುಗಿದ ದೇವಿ ಅನ್ನಪೂರ್ಣೇಶ್ವರಿ ಉತ್ಸವ
WhatsApp Group Join Now
Telegram Group Join Now

ಬೆಳಗಾವಿ: ವಿಶೇಷ ರೀತಿಯ ಚಂಡಿವಾದ್ಯಗಳ ಸದ್ದು, ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಅಪಾರ ಜನಸಾಗರ, ದೇವಿಯ ಪಲ್ಲಕ್ಕಿ ಉತ್ಸವವನ್ನು ಕಂಡು ಕಣ್ಣತುಂಬಿಕೊಂಡ ಭಕ್ತಾದಿಗಳು, ದೇವಿಯ ಉತ್ಸವದ ನಂತರ ಪ್ರಸಾದವನ್ನು ಸ್ವೀಕರಿಸಿ ತೃಪ್ತರಾದ ಜನ. ಕಣ್ಣಿಗೆ ಮುದ ನೀಡಿವ ಈಸುದರ ದೈಷ್ಯ ಕಂಡಿದ್ದು ಎಲ್ಲಿ ಅಂತಿರಾ.  ಇಲ್ಲಿದೆ ನೋಡಿ.

ಈ ಸುಂದರ ವೈಭವ ಕಂಡು ಬಂದಿದ್ದು, ಬೆಳಗಾವಿಯ ಅನ್ನಪೂರ್ಣೇಶ್ವರಿ ನಗರದ ದೇವಿಯಾದ ಅನ್ನಪೂರ್ಣೇಶ್ವರಿ ಪಲ್ಲಕ್ಕಿ ಮೆರವಣಿಗೆಯ ಉತ್ಸವವುದಲ್ಲಿ. ಸತತ 11 ವರ್ಷಗಳಿಂದ ಇಲ್ಲಿಯ ನಿವಾಸಿಗರು ಮತ್ತು ಭಕ್ತಾದಿಗಳು ಅನ್ನಪೂರ್ಣೇಶ್ವರಿ ದೇವಿಯ ಉತ್ಸವವನ್ನು ನಡೆಸಿಕೊಂಡು ಬಂದಿದ್ದಾರೆ. ಗಣ ಹೋಮ, ಚಂಡಿ ಹೋಮ, ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಹೀಗೆ ಹಲವು ಪೂಜಾ ಕಾರ್ಯಕ್ರಮಗಳು ಇಲ್ಲಿ ಜರಗುತ್ತವೆ. ಈ ದೇವಾಲಯ ಸ್ಥಾಪನೆಯ ಹಿನ್ನೆಲೆ ನೋಡುವುದಾದರೆ, ರವಿರಾಜ ಹೆಗಡೆ ಏಂಬ ಇಲ್ಲಿಯ ನಿವಾಸಿಯೊಬ್ಬರು ಮೊಡಬಿದರಯ ಅನ್ನ ಪೂರ್ಣೆಶ್ವರಿ ದೇವಾಲಯಕ್ಕೆ ಭೇಟಿದ್ದರು. ಆ ದೇವಾಲಯವನ್ನು ಕಂಡು ಈ ಭಾಗದ ಜನರಿಗೆ ಅನ್ನಪೂರ್ಣೆಶ್ವರಿ ದೇವಿಯ ದರ್ಶನ ಮಾಡಿಸಬೇಕು ಎಂಬ ಉದ್ದೇಶದಿಂದ ಈ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ.

ಪ್ರತಿ ವರ್ಷ 3 ದಿನಗಳ ಕಾಲ ಇಲ್ಲಿ ಅನ್ನಪೂರ್ಣೇಶ್ವರಿ ದೇವಿಯ ಜಾತ್ರೆ ಇರುತ್ತದೆ. ಜನರಿಗೆ ಅನ್ನ ಸಂತರ್ಪಣೆ ಉದ್ದೇಶದಿಂದ ಇಲ್ಲಿ ಪ್ರತಿ ಶುಕ್ರವಾರ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ತೆ ಇರುತ್ತದೆ. ಪಲ್ಲಕ್ಕಿ ಉತ್ಸವದ ವೇಳೆ ಮಹಿಳೆಯರು ಆರತಿ ಬೆಳಗಿ ದೇವಿಗೆ ನೈವೆಸ್ಯವನ್ನು ಅರ್ಪಿಸುತ್ತಾರೆ. ಉತ್ಸವದದ ದಿನ ದೇವಿಗೆ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ.

ವೈಭವದ ಅನ್ನಪೂರ್ಣೇಶ್ವರಿ ದೇವಿಯ ಉತ್ಸವಲ್ಲಿ ಮಹಿಳೆಯರು, ಯುವಕರು, ಹಿರಿಯರು, ಕಿರಿಯರು ಅಂತ್ಯಂತ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ವಿವಿಧ ವಾದ್ಯಮೇಳಗಳೊಂದಿಗೆ ನಗರದ ವಿವಿಧ ಬೀದಿಗಳಲ್ಲಿ ಈ ಪಲ್ಲಕ್ಕಿ ಉತ್ಸವ ಜರಗುತ್ತದೆ. 3 ದಿನಗಳ ಕಾಲ ವಿವಿಧ ರೀತಿಯ ಹೋಮ ಹವನ, ಪೂಜಾ ಕೈಂಕರ್ಯಗಳು ಜರುಗುತ್ತವೆ.

ಈ ಉತ್ಸವದಲ್ಲಿ ಅನ್ನಪೂರ್ಣೇಶ್ವರಿ ನಗರದ ನಿವಾಸಿಗಳು ಅಪಾರ ಜನಸಾಗರ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನಿತರಾಗುತ್ತಾರೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!