Ad imageAd image

ಮೊಟರ ಸೈಕಲನ್ನೆ ಕಳ್ಳತನ ಮಾಡಿ ಮಾರಾಟ ಮಾಡುತಿದ್ದ ಐನಾತಿ ಕಳ್ಳರನ್ನು ಬಂದಿಸಿದ ಗೋಕಾಕ ಪೋಲಿಸರು

Bharath Vaibhav
ಮೊಟರ ಸೈಕಲನ್ನೆ ಕಳ್ಳತನ ಮಾಡಿ ಮಾರಾಟ ಮಾಡುತಿದ್ದ ಐನಾತಿ ಕಳ್ಳರನ್ನು ಬಂದಿಸಿದ ಗೋಕಾಕ ಪೋಲಿಸರು
WhatsApp Group Join Now
Telegram Group Join Now

ಗೋಕಾಕ : ಮನೆ ಮುಂದೆ ನಿಲ್ಲಿಸಿದ, ,ಅಂಗಡಿ ಮುಂದೆ ನಿಲ್ಲಿಸಿದ ಅಥವಾ ಜನನಿ ಬಿಡದಲ್ಲಿ ನಿಲ್ಲಿಸಿದ ಮೊಟರ ಸೈಕಲಗಳನ್ನು ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೀರಿ ಅಂತವರಿಗೆ ಪೋಲಿಸ್ ಇಲಾಖೆ ಜೈಲಿನ ರುಚಿ ತೊರಿಸಿದ್ದನ್ನು ನೋಡಿದ್ದೀರಿ ಕೇಳಿದ್ದರಿ.

ಆದರೆ ಯಾರಿಗೆ ಯಾವ ಗಾಡಿ ಬೇಕೊ ಅದೆ ಕಂಪನಿಯ ಮೊಟರ ಸೈಕಲ್ ಕಳ್ಳತನ ಮಾಡಿ ಮಾರಾಟ ಮಾಡುತಿದ್ದರು ಈ ಐನಾತಿ ಕಳ್ಳರು, ಒಂದು ದಿನ ಮೊದಲು ಅಡ್ವಾನ್ಸ್ ಕೊಟ್ಟರೆ ಸಾಕು ಈ ಐನಾತಿ ಕಳ್ಳರು ಅದೆ ಕಂಪನಿಯ ಮೊಟರ ಸೈಕಲ್ ಎಲ್ಲೆ ಇರಲಿ ಅಂತದನ್ನೆ ಕಳ್ಳತನ ಮಾಡುತಿದ್ದ ಐನಾತಿ ಕಳ್ಳರನ್ನು ಹಿಡಿದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ ಗೋಕಾಕ ನಗರ ಪೋಲಿಸರು.

ಹೌದು ದಿನಾಂಕ 5/2/2026 ರಂದು ಗೋಕಾಕ ನಗರದ ಠಾಣೆಯಲ್ಲಿ ಮರಡಿಮಠದ ಪ್ರಕಾಶ ಬಸವಣ್ಣಿ ಕಡೋಲಿ ಇವರು ನಗರದ ರಿಲಾಯನ್ಸ್ ಮಾಲ್ಸ್ ಮುಂಬಾಗದಲ್ಲಿ ನಿಲ್ಲಿಸಿದ್ದ ತಮ್ಮ ಮೊಟರ ಸೈಕಲ್ ಕಳೆದುಕೊಂಡಿದ್ದ ಪ್ರಕರಣ ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು.

ಬೆಳಗಾವಿ ಎಸ್ಪಿ ಕೆ,ರಾಮರಾಜನ್ ಡಿವೈಎಸ್ಪಿ. ರವಿ ನಾಯಕ , ಸಿಪಿಐ ಸುರೇಶಬಾಬು ಮಾರ್ಗದರ್ಶನದಲ್ಲಿ ಪಿಎಸ್‌ಐ. ಕಿರಣ ಮೊಹಿತೆ ನೇತೃತ್ವದ ಸಿಬ್ಬಂದಿಗಳ ತಂಡ ರಚಿಸಿ ಕೊನೆಗೆ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸುವಲ್ಲಿ ಗೋಕಾಕ ನಗರ ಪೋಲಿಸರು ಯಶಸ್ವಿಯಾದರು.

ಇನ್ನು ಬೈಕ್ ಕಳ್ಳತನ ಪ್ರಕರಣದಲ್ಲಿ ಗೋಕಾಕ ಪೊಲೀಸ್‌ರಿಂದ ಬಂಧಿತರಾದ ಕುಂದರಗಿ ಗ್ರಾಮದವರಾದ ಪರಶುರಾಮ ಯಲ್ಲಪ್ಪಾ ಹಣಬರಟ್ಟಿ ಮತ್ತು ಲಗಮಣ್ಣಾ ಮಾರುತಿ ಮಲ್ಲನ್ನವರ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಗೋಕಾಕ ಶಹರದಿಂದ 6 ಮೊಟರ ಸೈಕಲ್,ಯಮಕನಮರಡಿ,ಹುಕ್ಕೇರಿ,ನೆಸರಗಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 9 ಮೊಟರ ಸೈಕಲ್ ಕಳವು ಮಾಡಿದ್ದು ಒಟ್ಟು 5,45,000/ ರೂ ಕಿಮ್ಮತ್ತಿನ ಒಟ್ಟು 15 ಮೊಟರ ಸೈಕಲಗಳನ್ನು ಕಳ್ಳತನ ಮಾಡಿದ್ದು ಒಪ್ಪಿಕೊಂಡಿದ್ದು, ಅವರಿಂದ ಜಪ್ತಮಾಡಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದಾರೆ.

ಇನ್ನು ಈ ಪ್ರಕರಣ ಬೇದಿಸಿ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾದ ಸಿಪಿಆಯ್ ಸುರೇಶಬಾಬು,ಪಿಎಸ್ಐ ಕಿರಣ ಮೊಹಿತೆ ಹಾಗೂ ಸಿಬ್ಬಂದಿಗಳಾದ ಕೆ,ಎನ್ ,ಇಳಿಗೇರ, ಬಿ,ಎಸ್,ಸಿದ್ನಾಳ ,ಎಮ್,ಹುಚ್ಚಗೌಡರ ಸೇರಿದಂತೆ ಇನ್ನೂಳಿದವರ ಕಾರ್ಯವನ್ನು ಎಸ್,ಪಿ, ಕೆ ರಾಮರಾಜನ್ ಶ್ಲ್ಯಾಘಿಸಿರುತ್ತಾರೆ.

ವರದಿ : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!