ಬೆಂಗಳೂರು : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬಂಗಾರದ ಬೆಲೆ ಗಗನಕ್ಕೇರಿದೆ.ಚಿನ್ನ ಕೊಳ್ಳುವುದು ಮಿಡಲ್ ಕ್ಲಾಸ್ ಜನರಿಗೆ ಕನಸಿನ ಮಾತಾಗಿದೆ. ಹೌದು, ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರುತ್ತಿದ್ದು, ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.
ಇಂದು ಬರೋಬ್ಬರಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 3280 ರೂಪಾಯಿ ಹೆಚ್ಚಳ ಆಗಿದೆ.24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,868 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 328 ರೂಪಾಯಿ ಹೆಚ್ಚಳ ಆಗಿದೆ.
22 ಕ್ಯಾರೆಟ್ ಬೆಲೆಯಲ್ಲಿ 300 ರೂಪಾಯಿ ಏರಿಕೆ ಆಗಿದ್ದು, 11,795 ರುಪಾಯಿಗೆ ಏರಿಕೆ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,868 ರೂ ಇದೆ.




