———————————ರಾಜ್ಯಮಟ್ಟದ ದೇಹದಾರ್ಢ್ಯ ಬಾಡಿ ಬಿಲ್ಡರ್ ಸ್ಪರ್ಧೆ
ಧಾರವಾಡ:ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಕುಮಾರ್ ಅರುಣ ಗಂಗಾಧರ ಗುಡ್ಡದಕೇರಿ ಇವರು ಬೆಂಗಳೂರಿನಲ್ಲಿ ನಡೆದ ಅಕ್ಟೋಬರ್ ರಂದು ರಾಜ್ಯಮಟ್ಟದ ದೇಹದಾರ್ಢ್ಯ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಚಿನ್ನದ ಪದಕ ಹಾಗೂ ಎಮ್ ಆರ್ ವಿ ಟಿ ಯು ಪ್ರಶಸ್ತಿಯನ್ನು ಪಡೆದಿದ್ದಾರೆ.

ಇವರು ವಿಜಯನಗರದ ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಮೂರನೇ ವರ್ಷದ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಿಷಿಯನ್ ವ್ಯಾಸಂಗ ಮಾಡುತ್ತಿದ್ದು ಮಹಾ ವಿದ್ಯಾಲಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಇವರು ಕುಮಾರ್ ನವೀನ್ ಗುರುಗಳ ಸಲಹೆಯಲ್ಲಿ ರಾಷ್ಟ್ರಮಟ್ಟದ ಬಾಡಿ ಬಿಲ್ಡರ್ ಮಾರ್ಗದರ್ಶನದಲ್ಲಿ ಇನ್ಫಿನಿಟಿ ಕೋರ್ ಫೀಟ್ನೆಸ್ ಎಂಬ ಜಿಮ್ ನಲ್ಲಿ ತರಬೇತಿ ಪಡೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಯುವಕನ ಈ ಸಾಧನೆ ಕಿರ್ತಿ ತಂದಿರುವದು ಜನರಿಗೆ ಹಾಗೂ ಕುಟುಂಬಕ್ಕೆ ಸಂತೋಷ ತಂದಿದೆ. ಇವರ ಮುಂದಿನ ಗುರಿ ಅಂತರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ತರಬೇತಿ ಪಡೆಯುತ್ತಿದ್ದಾರೆ.
ವರದಿ: ವಿನಾಯಕ ಗುಡ್ಡದಕೇರಿ




