ಲಿಂಗಸ್ಗೂರು : ಶುಭ ಶುಕ್ರವಾರದಂದು ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಚುನಾವಣೆಗೆ ಪಕ್ಷಗಳು ನಾಮಪತ್ರ ಸಲ್ಲಿಸಿದ್ದು ಯಾರಿಗೆ ಶುಭವಾಗಲಿದೆ..?
ಇದೇ ತಿಂಗಳು 21ರಂದು ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಚುನಾವಣೆ ನಡೆಯಲಿದ್ದು ನಂತರ 22 ನೇ ತಾರೀಕು ಮತ ಎಣಿಕೆ ಇರುವುದರಿಂದ ಇಂದು ಹಟ್ಟಿ ಚಿನ್ನದ ಗಣಿಯ ವಿವಿಧ ಪಕ್ಷಿಗಳಾದ ಟಿ ಯು ಸಿ ಐ, ಎ ಐ ಟಿ ಯು ಸಿ, ಸಿ ಐ ಟಿ ಯು, ಆಕಳು ಪಕ್ಷ, ಮತ್ತು ಬಿ ಎಂ ಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.
ಇಂದು ಮಧ್ಯಾಹ್ನ 2:30ರ ಸುಮಾರಿಗೆ ಹಟ್ಟಿ ಪಟ್ಟಣದ ಕ್ಯಾಂಪ್ ಬಸ್ ನಿಲ್ದಾಣದಿಂದ ಹಟ್ಟಿ ಚಿನ್ನದ ಗಣಿ ಕಚೇರಿಯವರಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಘೋಷಣೆಗಳು ಕೂಗುತ್ತಾ ಮೆರವಣಿಗೆಯ ಮೂಲಕ ಆಗಮಿಸಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು ಮೊದಲನೇ ನಾಮಪತ್ರ ಟಿ ಯು ಸಿ ಐ ಪಕ್ಷದಿಂದ ಆರ್ ಮಾನಸಯ್ಯ , ಅಮೀರ್ ಅಲಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಸೇರಿಕೊಂಡು ಮೊದಲನೇ ನಾಮಪತ್ರ ಸಲ್ಲಿಸಿದರು .
ನಂತರ ವಿಜಯ ಭಾಸ್ಕರ್, ಚಂದ್ರು, ನಾಗರೆಡ್ಡಿ ಜೇರಬಂಡಿ ಇವರ ಪಕ್ಷವಾದ ಎಐಟಿಯುಸಿ ತಮ್ಮ ಪಕ್ಷದ ಕಚೇರಿಯಿಂದ ನೂರಾರು ಜನ ಕಾರ್ಮಿಕರೊಂದಿಗೆ ಪಕ್ಷದ ಘೋಷಣೆಗಳು ಕೂಗುತ್ತಾ ಮೆರವಣಿಗೆ ಮೂಲಕ ಚುನಾವಣೆ ಅಧಿಕಾರಿಗೆ ಎರಡನೇ ನಾಮಪತ್ರ ಸಲ್ಲಿಸಿದರು, ವಾಲಿಬಾಬ್ ನೇತೃತ್ವದ ಹಾಕುವ ಪಕ್ಷ ತಮ್ಮ ಮುಖಂಡರು ಮತ್ತು ಕಾರ್ಮಿಕರೊಂದಿಗೆ ಜೈಕಾರ ಹಾಕುತ್ತಾ ಮೆರವಣಿಗೆ ಮೂಲಕ ಮೂರನೇ ನಾಮಪತ್ರ ಸಲ್ಲಿಸಿದರು.
ಎಸ್ ಎಂ ಶಫೀ ನೇತ್ರತ್ವದ ಸಿಐಟಿಯು ಪಕ್ಷವು ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ತಮ್ಮ ಪಕ್ಷದ ಕಚೇರಿಯಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮೂಲಕ ಆಗಮಿಸಿ ಚುನಾವಣೆ ಅಧಿಕಾರಿಗಳಿಗೆ ನಾಲ್ಕನೇ ನಾಮಪತ್ರ ಸಲ್ಲಿಸಿದರು, ಹೊಸದಾಗಿ ಬಿಎಂಎಸ್ ಪಕ್ಷ ಚಿನ್ನದ ಗಣಿ ಕಾರ್ಮಿಕರ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಇಂದು ಮೆರವಣಿಗೆಯ ಮೂಲಕ ಚುನಾವಣೆ ಆಗಮಿಸಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಮತ್ತು ಪಕ್ಷೇತರ ಅಭ್ಯರ್ಥಿಗೆ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ ಒಟ್ಟು ಇಂದು ಅಧಿಕೃತವಾಗಿ ಕಾರ್ಮಿಕ ಸಂಘದ ಚುನಾವಣೆಗೆ 120 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದರು ಯಾವುದೇ ಹಿತಕರ ಘಟನೆ ನಡೆಯದಂತೆ ಹಟ್ಟಿ ಪೊಲೀಸ್ ಪಿಎಸ್ಐ ಧರ್ಮಣ್ಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.




