ನವದೆಹಲಿ: ಚಿನ್ನದ ಬೆಲೆ ಭಾರಿ ಏರಿಕೆಯಾಗಿದ್ದರೂ ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಭಾರತ ಬರೋಬ್ಬರಿ 179.4 ಟನ್ ಚಿನ್ನ ಆಮದು ಮಾಡಿಕೊಂಡಿದೆ. ಈ ಅವಧಿಯಲ್ಲಿ 75,000 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮಾರಾಟವಾಗಿದೆ.
ಕಳೆದ ವರ್ಷ 143.4 ಟನ್ ಚಿನ್ನ ಆಮದು ಈ ಬಾರಿ ಶೇಕಡ 25ರಷ್ಟು ಹೆಚ್ಚಾಗಿದ್ದು 179.4 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ 75,470 ಕೋಟಿ ರೂಪಾಯಿ ಮೌಲ್ಯದ 136 ಟನ್ ಚಿನ್ನದ ವಹಿವಾಟು ನಡೆದಿದ್ದು, ಕಳೆದ ಬಾರಿಗಿಂತ ಶೇಕಡ 20ರಷ್ಟು ಅಧಿಕವಾಗಿದೆ.
ಇದರಲ್ಲಿ 52,75 ಕೋಟಿ ರೂ. ಮೌಲ್ಯದ 95.5 ಟನ್ ಗಳಷ್ಟು ಆಭರಣ ಮಾರಾಟ ಮಾಡಲಾಗಿದ್ದು, ಹೂಡಿಕೆಯಾಗಿ 22,720 ಕೋಟಿ ರೂ. ಮೌಲ್ಯದ 41.4 ಪ್ರಮಾಣದ ಚಿನ್ನದ ಹೂಡಿಕೆಯಾಗಿದೆ. ಈ ಅವಧಿಯಲ್ಲಿ 10 ಗ್ರಾಂ ಚಿನ್ನದ ಸರಾಸರಿ ದರ 55,000 ರೂ.ನಷ್ಟಿದ್ದು, ಕಳೆದ ಬಾರಿಗಿಂತ ಶೇಕಡ 11ರಷ್ಟು ಏರಿಕೆಯಾಗಿದೆ.