ಹೊಸ ವರ್ಷವೆಂದರೆ ಕ್ಯಾಲೆಂಡರ್ ಮಾತ್ರ ಬದಲಾಗುವುದಲ್ಲ. ಕ್ಯಾಲೆಂಡರ್ ಜೊತೆಗೆ ಹೊಸತನ್ನು ಬರಮಾಡಿಕೊಳ್ಳುವ ಸಂತಸದ ಸಮಯ.
ಹೊಸ ಉತ್ಸಾಹ, ಹೊಸ ಕನಸು, ಹೊಸ ಗುರಿ, ಹೊಸ ಯೋಜನೆ, ಹೊಸ ರೆಸೊಲ್ಯೋಷನ್ , ಹೊಸ ರೆವಲ್ಯೂಷನ್ ಎಲ್ಲದಕ್ಕೂ ಈ ಹೊಸ ವರ್ಷವೇ ಹೊಸ್ತಿಲು.
ಹಳೆಯ ಸೋಲಿಗೆ ಈ ವರ್ಷ ಉತ್ತರ ನೀಡೋಣ. ಹಳೆಯ ಕಹಿ ನೆನಪುಗಳಿಗೆ ವಿದಾಯ ಹೇಳಿ ಹೊಸ ಸಿಹಿ ಕ್ಷಣಗಳನ್ನು ನಿರೀಕ್ಷಿಸೋಣ. ಹಳೆಯ ವೈಫಲ್ಯಗಳನ್ನು ಮೆಟ್ಟಿನಿಂತು ಹೊಸ ಕನಸನ್ನು ಕಟ್ಟೋಣ
ಹೊಸ ವರುಷವನ್ನು ಉತ್ಸಾಹ, ಸಂಭ್ರಮಗಳಿಂದ ಸ್ವಾಗತಿಸೋಣ.