ಹುನಗುಂದ : ಉತ್ತಮ ಜೀವನ ಶೈಲಿಯೇ ಉತ್ತಮ ಆರೋಗ್ಯದ ಗುಟ್ಟು ಎಂದು ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ತಿಳಿಸಿದರು.

ತಾಲ್ಲೂಕಿನ ಹಿರೇಮಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡ ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, 880 ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾದಾಗ ಕೂಡಲೇ ಆಸ್ಪತ್ರೆಗೆ ದಾಖಲಾಗಿ, ನಿರ್ಲಕ್ಷ್ಯ ಮಾಡಿದ್ದರೇ ದೊಡ್ಡ ಅನಾಹುತ ಗುರಿಯಾಗ ಬೇಕಾಗುತ್ತದೆ. ಆದರಿಂದ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೇ ಆರೋಗ್ಯದಿಂದ ಇರಲು ಸಾಧ್ಯವೆಂದು ತಿಳಿಸಿದರು.

ಆರೋಗ್ಯ ಇಲಾಖೆ ಸಿಎಚ್ ಓ ಸುಜಾತಾ ಸಂಕಣ್ಣವರ ಮಾತನಾಡಿ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೇ ಆರೋಗ್ಯದ ಕಾಳಜಿ ವಹಿಸಬೇಕು. ಗುಣಮಟ್ಟದ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ ಎಂದು ತಿಳಿಸಿದರು.

ಬಳಿಕ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಹಾಗೂ ತಾಂತ್ರಿಕ ಸಂಯೋಜಕ ನವೀನ್ ಹಂಚಾಟೆಯವರಿಗೆ ಗ್ರಾಮ ಪಂಚಾಯಿತಿ ಕಡೆಯಿಂದ ಸನ್ಮಾನಿಸಲಾಯಿತು. ಇನ್ನು ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ಶುಗರ್, ಸೇರಿದಂತೆ ಹಲವು ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಕುಂತಲಾ ಮೇಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಹುಲ್ಲಿಕೇರಿ, ತಾಂತ್ರಿಕ ಸಂಯೋಜಕ ನವೀನ್ ಹಂಚಾಟೆ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಕಮಲಾ ರಾಠೋಡ, ಸುಜಾತಾ ಸಂಕಣ್ಣವರ, ಪ್ರಸನ್ನ ಜಮಖಂಡಿ, ಎಸ್ ಎಸ್ ಅಂಗಡಿ, ಶ್ರೀದೇವಿ ಗುಡಗದ್ದಿ, ಚಂದ್ರಕಲಾ ಕೋಲಾಕರ, ಬಿಎಫ್ ಟಿ ಸಂತೋಷ ಅಕ್ಕಿ, ಬ್ರಹ್ಮಲಿಂಗೇಶ್ ಅಂತರಗೊಂಡ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಕಾಯಕ ಮಿತ್ರರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.




