ಬೆಂಗಳೂರು : ಟ್ರಾಫಿಕ್ ಉಲ್ಲಂಘನೆ ದಂಡ ಪಾವತಿ (Traffic Fine) ಮಾಡಲು ಸಾರಿಗೆ ಇಲಾಖೆ ಮತ್ತೊಮ್ಮೆ ರಿಯಾಯಿತಿ (Traffic Fine Discount) ಘೋಷಿಸಿ ಆದೇಶಿಸಿದೆ.
ಸಂಚಾರಿ ನಿಯಮ ಉಲ್ಲಂಘಿಟಿ ದಂಡ ಕಟ್ಟದ ವಾಹನ ಮಾಲೀಕರಿಗೆ ಬರೋಬ್ಬರಿ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗಿದೆ.
ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅಧಿಕೃತ ಆದೇಶ ಹೊರಡಿಸಿದ್ದು, ದಂಡದ ಅರ್ಧದಷ್ಟು ಹಣ ತುಂಬಲು ವಾಹನ ಸವಾರರಿಗೆ ಅವಕಾಶ ಕಲ್ಪಿಸಲಾಗಿದ್ದು, 50% ರಷ್ಟು ದಂಡ ಪಾವತಿ ಮಾಡಲು ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಮಾತ್ರ ಅವಕಾಶ ನೀಡಲಾಗಿದೆ.ಈ ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ 2023ರ ಫೆಬ್ರವರಿ 11ರವರೆಗೆ ದಾಖಲಾದ ಪ್ರಕರಣಗಳಿಗೆ ಅನ್ವಯವಾಗಲಿದೆ.
2023ರ ಫೆಬ್ರವರಿ 12ರ ನಂತರದ ಪ್ರಕರಣಗಳಿಗೆ ಇದು ಅನ್ವಯವಾಗುವುದಿಲ್ಲ. ಯಾಕಂದ್ರೆ, ಬಹಳ ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಬಾಕಿ ಉಳಿಸಿಕೊಂಡವರಿಗೆ ಈ ಆಫರ್ ನೀಡಲಾಗಿದೆ. ಇನ್ನುಳಿದಂತೆ 2023ರ ಫೆಬ್ರವರಿ 12ರ ನಂತರದ ಕೇಸ್ ಗಳಿಗೆ ಮುಂದಿನ ವರ್ಷ ಆಫರ್ ನೀಡುವ ಸಾಧ್ಯತೆಗಳಿವೆ.
ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯ ಸಂಚಾರಿ ಇ ಚಲನ್ ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ 50% ರಿಯಾಯಿತಿ ಇದ್ದು, 2023ರ ಫೆಬ್ರವರಿ 11ರ ಯಾರೆಲ್ಲಾ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದೇ ಹಾಗೇ ಬಾಕಿ ಉಳಿಸಿಕೊಂಡಿದ್ದಿರೋ ಈ ಆಫರ್ ಸದುಪಯೋಗಪಡಿಸಿಕೊಳ್ಳಬಹುದು. ಹಳೇಯ ಬಾಕಿ ದಂಡವನ್ನು ರಿಯಾಯಿತಿಯಲ್ಲಿ ಈಗ ಪಾವತಿಸಿದ ಒಳಿತು. ಯಾಕಂದ್ರೆ, ಮುಂದಿನ ಸಲ ಇಲ್ಲಿಂದ ಇಲ್ಲಿಯವರೆಗೆ ಮಾತ್ರ ಎಂದು ನಿರ್ಧಿಷ್ಟ ಅವಧಿಯನ್ನು ನಿಗದಿ ಮಾಡಲಾಗುತ್ತೆ.




