ಶಬರಿಮಲೆ: ಶ್ರೀ ಕ್ಷೇತ್ರ ಶಬರಿಮಲೆ ಯಾತ್ರಾರ್ಥಿಗಳು, ದಿನಗೂಲಿ ನೌಕರರು ಮತ್ತು ಎಲ್ಲಾ ಸಿಬ್ಬಂದಿಗೆ 5 ಲಕ್ಷ ರೂಪಾಯಿ ವಿಮೆ ಯೋಜನೆ ಜಾರಿಗೆ ತರಲಾಗಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ ಅಪಘಾತ ವಿಮೆ ಒದಗಿಸಲಿದೆ.
ಒಂದು ವರ್ಷದ ಅವಧಿಯ ವಿಮೆಯಲ್ಲಿ ಆಕಸ್ಮಿಕ ಮರಣ ಸಂಭವಿಸಿದರೆ ಮೃತರ ಅವಲಂಬಿತರಿಗೆ 5 ಲಕ್ಷ ರೂಪಾಯಿ ಲಭಿಸಲಿದೆ.ತಿರುವಾಂಕೂರು ದೇವಸ್ವಂ ಮಂಡಳಿ ವತಿಯಿಂದ ವಿಮೆಯ ಪ್ರೀಮಿಯಂ ಮೊತ್ತವನ್ನು ಭರಿಸಲಾಗುತ್ತದೆ.
ಶಬರಿಮಲೆ ಸನ್ನಿಧಾನಂ ಅಥವಾ ಆಸುಪಾಸಿನಲ್ಲಿ ಯಾತ್ರಾರ್ಥಿಗಳು ಹೃದಯಾಘಾತ ಅಥವಾ ಅಪಘಾತದಿಂದ ಮೃತಪಟ್ಟಲ್ಲಿ ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಮನೆಗೆ ತಲುಪಿಸಲಾಗುವುದು.
ದಿನಗೂಲಿ ನೌಕರರು, ಯಾತ್ರಾರ್ಥಿಗಳು, ಎಲ್ಲಾ ಸಿಬ್ಬಂದಿಗೆ ತಿರುವಾಂಕೂರು ದೇವಸ್ವಂ ಮಂಡಳಿಯಿಂದ 5 ಲಕ್ಷ ರೂ. ವಿಮೆ ಯೋಜನೆ ಜಾರಿಗೆ ತರಲಾಗಿದೆ.