Ad imageAd image

ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹುಬ್ಬಳ್ಳಿ-ರಾಮೇಶ್ವರಂ ರೈಲು ಪುನರಾರಂಭ 

Bharath Vaibhav
ಪ್ರಯಾಣಿಕರಿಗೆ ಗುಡ್ ನ್ಯೂಸ್ : ಹುಬ್ಬಳ್ಳಿ-ರಾಮೇಶ್ವರಂ ರೈಲು ಪುನರಾರಂಭ 
RAILWAY
WhatsApp Group Join Now
Telegram Group Join Now

ಹುಬ್ಬಳ್ಳಿ : ಈ ಮೊದಲು ಕಾರ್ಯಾಚರಣೆಯ ಕಾರಣಾಂತರಗಳಿಂದ ರದ್ದುಗೊಳಿಸಲಾಗಿದ್ದ ಹುಬ್ಬಳ್ಳಿ-ರಾಮೇಶ್ವರಂ ನಡುವಿನ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಪುನರಾರಂಭಿಸಲಾಗಿದೆ.

ರೈಲು ಸಂಖ್ಯೆ 07355 ಎಸ್‌ಎಸ್‌ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಮೊದಲು ಏಪ್ರಿಲ್ 26, 2025 ರವರೆಗೆ ಈಗ ಏಪ್ರಿಲ್ 12, 2025 ರಿಂದ ಜೂನ್ 28, 2025 ರವರೆಗೆ ಪುನರಾರಂಭಿಸಲಾಗುತ್ತದೆ.

ರೈಲು ಸಂಖ್ಯೆ 07356 ರಾಮೇಶ್ವರಂ – ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಮೊದಲು ಏಪ್ರಿಲ್ 27, 2025 ರವರೆಗೆ ರದ್ದುಗೊಳಿಸಲಾಗಿತ್ತು. ಈಗ ಏಪ್ರಿಲ್ 13, 2025 ರಿಂದ ಜೂನ್ 29, 2025 ರವರೆಗೆ ಪುನರಾರಂಭಿಸಲಾಗುತ್ತದೆ.

ನೈಋತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆಯ ಕಾರಣಗಳಿಂದ ರದ್ದುಗೊಳಿಸಲಾಗಿದೆ ಎಂದು ಈ ಹಿಂದೆ ಸೂಚಿಸಲಾಗಿದ್ದ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಈಗ ಮರುಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!