ಬೇರೆ ಬೇರೆ ಫ್ರಾಂಚೈಸಿಗಳಿಂದ ಬೇರೆ ಬೇರೆ ಸಂಬಳ ಫಿಕ್ಸ್
ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಮತ್ತು ಆಫ್‌ಲೈನ್ ಆಡಿಷನ್ ನಡೆಯುತ್ತವೆ. ಈ ವೇಳೆ ನೃತ್ಯ ಕೌಶಲ್ಯವನ್ನು ಪರೀಕ್ಷಿಸಲಾಗುತ್ತದೆ. ಐಪಿಎಲ್‌ನಲ್ಲಿ ಚಿಯರ್‌ಲೀಡರ್ ಆಗಲು ನೃತ್ಯದ ಜೊತೆಗೆ 3:30 ಗಂಟೆಗಳ ಕಾಲ ನೃತ್ಯ ಮಾಡುವ ಸಾಮರ್ಥ್ಯ ಹೊಂದಿರಬೇಕು. ಸಂವಹನ ಕೌಶಲ್ಯಗಳನ್ನೂ ಸಹ ಪರೀಕ್ಷಿಸಲಾಗುತ್ತದೆ. ಆದರೆ ಐಪಿಎಲ್ ಫ್ರಾಂಚೈಸಿಗಳು ನೇರವಾಗಿ ಚಿಯರ್‌ಲೀಡರ್‌ಗಳನ್ನು ಆಯ್ಕೆ ಮಾಡುವುದಿಲ್ಲ. ಇದಕ್ಕಾಗಿ ಕೆಲ ಸಂಸ್ಥೆಗಳ ಸಹಾಯ ಪಡೆಯುತ್ತವೆ.
ಐಪಿಎಲ್ನ ಚಿಯರ್‌ಲೀಡರ್‌ಗಳಿಗೆ ಒಂದೊಂದು ಫ್ರಾಂಚೈಸಿಗಳು ಒಂದೊಂದು ರೀತಿಯ ಸಂಬಳವನ್ನು ನೀಡುತ್ತವೆ. ವರದಿಗಳ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಚಿಯರ್‌ಲೀಡರ್‌ಗಳಿಗೆ ಪ್ರತಿ ಪಂದ್ಯಕ್ಕೆ 24,000ದಿಂದ 25,000 ರೂಪಾಯಿವರೆಗೆ ನೀಡುತ್ತದೆ.
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ಪ್ರತಿ ಪಂದ್ಯಕ್ಕೆ 20,000 ರೂ, ಚೆನ್ನೈ ಸೂಪರ್ ಕಿಂಗ್ಸ್ 17,000 ರೂ, ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 12,000 ರಿಂದ 15,000 ರೂ.ವರೆಗೆ ಸಂಭಾವನೆ ನೀಡುತ್ತವೆ. ಒಂದು ವೇಳೆ ತಂಡ ಉತ್ತಮ ಪ್ರದರ್ಶನ ನೀಡಿದರೆ ಚಿಯರ್‌ಲೀಡರ್‌ಗಳಿಗೆ ಬೋನಸ್ ಸಹ ಸಿಗುತ್ತದೆ.
ಸಂಬಳದ ಜೊತೆಗೆ, ಫ್ರಾಂಚೈಸಿ ಚಿಯರ್‌ಲೀಡರ್‌ಗಳಿಗೆ ಕೆಲವು ಸೌಲಭ್ಯಗಳನ್ನು ಸಹ ಒದಗಿಸುತ್ತದೆ. ಇದರಲ್ಲಿ ಪ್ರಯಾಣ ವೆಚ್ಚಗಳು, ಹೋಟೆಲ್ ವಸತಿ, ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳು ಸೇರಿರುತ್ತವೆ.