ಸೇಡಂ:- ಸೇಡಂ ಆಡಳಿತ ಸೌಧದಲ್ಲಿ ಸ್ವಚ್ಛತೆಯ ಕುರಿತು ಮಾನ್ಯ ತಹಶಿಲ್ದಾರರಿಗೆ ಮೌಖಿಕವಾಗಿ ಲಿಖಿತವಾಗಿ ಮನವಿ ಮಾಡಿದ್ದೆವೆ, ಇಲ್ಲಿವರೆಗೆ ಒಂದು ತಿಂಗಳು ಆಗುತ್ತಿದೆ ಸ್ವಚ್ಚತೆಯ ಕುರಿತು ಕುಡಿಯುವ ನೀರು ಹಾಗೂ ಶೌಚಲಯದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ ಒಂದುವೇಳೆ ಇದೆ ರೀತಿಯಾಗಿ ವಿಳಂಬ ಮಾಡಿದರೆ ಅಂಬೇಡ್ಕರ್ ಯುವ ಸೇನೆ ಸೇಡಂ ವತಿಯಿಂದ ಉಗ್ರವಾದ ಹೋರಾಟ ಮಾಡಿ ತಾಲೂಕ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಗೋಪಾಲ ಎಲ್ ನಾಟಿಕರ್ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಮುಧೋಳ ಹೊಬಳಿ ವಲಯ ಅಧ್ಯಕ್ಷರಾದ ನರೇಶ್ ಎ ನಾಟಿಕಾರ್ ಉಪಾಧ್ಯಕ್ಷರು ಕೈಲಾಸ ಚಂದಪೂರ, ಅಂಜಿ ನಾಟಿಕಾರ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.