Ad imageAd image

ಪೇಜಾವರ ಸ್ವಾಮಿಗಳ ಹೇಳಿಕೆಗೆ ಗೋಪಾಲ ಎಲ್ ನಾಟೇಕಾರ ಖಂಡನೆ,

Bharath Vaibhav
ಪೇಜಾವರ ಸ್ವಾಮಿಗಳ ಹೇಳಿಕೆಗೆ ಗೋಪಾಲ ಎಲ್ ನಾಟೇಕಾರ ಖಂಡನೆ,
WhatsApp Group Join Now
Telegram Group Join Now

ಸೇಡಂ : ಉಡುಪಿ ಪೇಜಾವರ ಮಠದ ಪೂಜ್ಯ ವಿಶ್ವ ತೀರ್ಥ ಸ್ವಾಮೀಜಿಯವರು “ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು” ಎಂದು , ಹೇಳಿಕೆ ನೀಡಿರುವುದನ್ನು. ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷರಾದ ಗೋಪಾಲ ಎಲ್ ನಾಟೇಕಾರ ರವರು ಖಂಡಿಸಿದ್ದಾರೆ.

ಇಲ್ಲಿ ಅಗೌರವಕ್ಕೆ ಬಲಿಯಾಗಿರುವ ಹಿಂದೂಗಳು ಯಾರು? ಯಾವ ರೀತಿಯಾಗಿ ಅವರಿಗೆ ಅವಮಾನವಾಗಿದೆ. ಸಂವಿಧಾನದಲ್ಲಿ ಹಿಂದೂಗಳಿಗೆ ಅಗೌರವಿಸುವ ಅಂಶ ಯಾವುದಿದೆ. ಎಂದು ಗೋಪಾಲ ನಾಟೇಕಾರ ಪ್ರಶ್ನೆಯನ್ನು ಹಾಕಿದ್ದರೆ ಇಲ್ಲಿಯತನಕ ಯಾವ ಹಿಂದೂಗಳು ತಮ್ಮ ಗೌರವಕ್ಕೆ ಚ್ಯುತಿಯಾಗಿದೆ ಎಂದು ಯಾವ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಇವರು ಯಾವುದೇ ಆಧಾರಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತಾಡಿರುವುದರ ಉದ್ದೇಶವು ಬೇರೆಯೇ ಇದ್ದಂತೆ ಕಾಣುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ .

ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಹಿಂದೂಗಳೆಲ್ಲರಿಗೂ ಸ್ವತಂತ್ರಭಾರತದ ಸಂವಿಧಾನವೇ ಸನ್ಮಾನ ಮತ್ತು ಸಂರಕ್ಷಣೆ ನೀಡಿದೆ. ವಾಸ್ತವವಾಗಿ ಅಗೌರವ, ಅಪಮಾನ, ಹಿಂಸೆ, ಹತ್ಯೆಗಳಿಗೆ ಬಲಿಯಾಗುತ್ತಿರುವವರೆಲ್ಲರೂ ಹಿಂದೂಗಳೆಂದೇಗುರುತಿಸಲ್ಪಟ್ಟಿರುವ ಎಸ್.ಸಿ./ಎಸ್.ಟಿ.ಗಳೇ ಆಗಿದ್ದಾರೆ ಮತ್ತು ತಾವೂ ಸಹ ಹಿಂದೂಗಳು ಎಂದೇ ಹೇಳಿಕೊಳ್ಳುತ್ತಿರುವವರಿಂದಲೇ ಈ ಹಿಂದೂಗಳೆಲ್ಲರೂ ಅಗೌರವ, ಅಪಮಾನ ಮತ್ತು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ .

ಬ್ರಾಹ್ಮಣ್ಯದ ಸಂರಕ್ಷಕರಾದ ಪೇಜಾವರರು, ತಮ್ಮವರ ಬ್ರಾಹ್ಮಣ್ಯ ಧೋರಣೆಗೆ ಬಲಿಯಾಗುತ್ತಿರುವ ಎಸ್.ಸಿ./ಎಸ್. ಟಿ.ಮತ್ತಿತರರ ಶೋಷಿತರಿಗೆ ಸಂರಕ್ಷಣೆ ನೀಡುತ್ತಿರುವ ಸಂವಿಧಾನವನ್ನು ಬದಲಿಸಬೇಕು ಎನ್ನುತ್ತಿದ್ದಾರೆ.ಅಂದರೆ, ಹಳೆಯ ಮನುಸ್ಮೃತಿಯನ್ನೇ ಜಾರಿಗೆ ತರಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ! ಇವರ ಸಂವಿಧಾನ-ವಿರೋಧಿಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಇಂತಹ ಹೇಳಿಕೆ ನೀಡಿರುವ ಈಮನುವಾದಿ ಪೇಜಾವರರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮಕೈಗೊಳ್ಳಬೇಕೆಂದು ಸರ್ಕಾರವನ್ನು ಅಂಬೇಡ್ಕರ್ ಯುವ ಸೇನೆ ಸೇಡಂ ಘಟಕ ಒತ್ತಾಯಿಸುತ್ತದೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!