ಸೇಡಂ : ಭಾರತ ಸಂವಿಧಾನದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ನ 52ನೇ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ ನಡೆದ ಈ ಘಟನೆ ಖಂಡನಿಯವಾದದ್ದು ಎಂದು ಗೋಪಾಲ ಎಲ್ ನಾಟೆಕಾರ್ ಹೇಳಿದ್ದಾರೆ
ಮತಾಂಧ ಮನಸ್ಥಿತಿಯ ವಕೀಲ ಕಿಶೋರ ರಾಕೇಶ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷರು ಹಾಗೂ ವಕೀಲರಾದ ಗೋಪಾಲ ಎಲ್ ನಾಟೆಕಾರ್ ಪತ್ರಿಕಾ ಪ್ರಕಠಣೆಯ ಮೂಲಕ ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಯವರು ಧಮ್ಮ ಮಾರ್ಗದಲ್ಲಿ ನಡೆಯುತ್ತಿರುವ ಪ್ರಭಲ ಡಾ. ಅಂಬೇಡ್ಕರ್ ಅನುಯಾಯಿಯಾಗಿದ್ದು ಮುಖ್ಯ ನ್ಯಾಯಮೂರ್ತಿ ಯಾಗಿ ಪ್ರಮಾಣ ವಚನ ಸ್ವೀಕರಿಸಿಸುವ ಸಂದರ್ಭದಲ್ಲಿ ನಾನು ಈ ಮಟ್ಟಕ್ಕೆ ಬೆಳೆಯಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲಕ ಪಡೆದ ಶಿಕ್ಷಣ ಕಾರಣ ಎಂದು ಪ್ರಭಲವಾಗಿ ಪ್ರತಿಪಾದಿಸಿದ್ದರು. ಇದನ್ನು ಮನುವಾದಿ ಮನಸ್ಥಿತಿಯ ಜಾತಿವಾದಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಅವರು ಬುಲ್ಡೋಜರ್ ನ್ಯಾಯವನ್ನು ವಿರೋಧಿಸಿ ತೀರ್ಪು ನೀಡಿದರು.ಅವರು ವಿಷ್ಣು ಮೂರ್ತಿ ಭಗ್ನ ಪ್ರಕರಣದಲ್ಲಿ ನೀವು ಆರ್ಕೆಲಾಜಿಕಲ್ ಸರ್ವೆ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿ ಎಂದು ಸಂವಿಧಾನದ ಪ್ರಕಾರ ತೀರ್ಪು ನೀಡುವ ಮೂಲಕ ನ್ಯಾಯದ ಪರ ನಿಂತಿದ್ದರು.ಅವರ ತಾಯಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದರು.ಹಾಗಾಗಿ ರಾಕೇಶ್ ಕಿಶೋರ್ ಎಂಬ ಮನುವಾದಿ ಸನಾತನಿಯೊಬ್ಬ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಿದ್ದಾನೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಕೇವಲ 6 ತಿಂಗಳ ಕಾಲ ಅಷ್ಟೇ ಸಿ ಜೆ ಐ ಆಗುತ್ತಿರುವುದಕ್ಕೆ ಮನವಾದಿಗಳು ಇಷ್ಟೊಂದು ವಿಷ ಖಾರುತ್ತಿರುವುದು ದುರದೃಷ್ಟಕರ. ಇದು ಸಂಪೂರ್ಣ ದೇಶದ್ರೋಹ ಕೃತ್ಯವಾಗಿದ್ದು, ಅವನಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಜಾತಿವಾದಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷರು ಹಾಗೂ ವಕೀಲರಾದ ಗೋಪಾಲ ಎಲ್ ನಾಟೆಕಾರ್ ಪತ್ರಿಕಾ ಪ್ರಕಟನೆಯ ಮೂಲಕ ಆಗ್ರಹಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




