ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಏನೋ ಅನುಷ್ಟಾನಕ್ಕೆ ತಂದಿದ್ದಾರೆ, ಆದರೆ ಸರಿಯಾಗಿ ಜನರಿಗೆ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ ಇದರ ನಡುವೆಯೇ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್‌ಎಂ ರೇವಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆಗಳು ಬಿಟ್ಟರೆ ಬೇರೆ ಯಾವ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ.. ಅದರಲ್ಲೂ ಗೃಹಲಕ್ಷ್ಮಿ ಹಣ ಅಂತೂ ಒಂದು ತಿಂಗಳು ಬಂದರೆ ಮೂರು ತಿಂಗಳು ಸುದ್ದಿ ಇರಲ್ಲ ಇದೀಗ ಈ ಬಗ್ಗೆ ಹೆಚ್‌ಎಂ ರೇವಣ್ಣ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದಾಗಿನಿಂದ ಗೃಹಲಕ್ಷ್ಮಿ ಹಣ ಕೊಡುವುದನ್ನು ನಿಲ್ಲಿಸಿಲ್ಲ.. ಆದರೆ ಹಣ ಕೊಡದಕ್ಕೆ ಒಂದಲ್ಲ ಒಂದು ತೊಡಕುಗಳು ಆಗುತ್ತಿವೆ.
ಇಲ್ಲಿಯವರೆಗೆ 1.20 ಲಕ್ಷ ಜನರಿಗೆ ಹಣ ಹೋಗಿರಲಿಲ್ಲ. ಈಗ 58 ಸಾವಿರ ಜನ ಸಮಸ್ಯೆ ಬಗೆಹರಿಸಿದ್ದೇವೆ. ಎಲ್ಲರ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು.
ಎಲ್ಲರಿಗೂ ಹಣ ಹಾಕುವ ಪ್ರಯತ್ನ ಮಾಡುತ್ತಿದ್ದೇವೆ, ಹೀಗಾಗಿ ಪ್ರತಿ ತಿಂಗಳು ಹಣ ಕೊಡೋದಕ್ಕೆ ನಮ್ಮಿಂದ ಆಗ್ತಾ ಇಲ್ಲ, ಹೀಗಾಗಿ ಮೂರು ತಿಂಗಳಿಗೊಮ್ಮೆ ಹಣ ಹಾಕುತ್ತೇವೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್‌ಎಂ ರೇವಣ್ಣ ಹೇ ಳಿದ್ದಾರೆ.