ಬೆಂಗಳೂರು ಅನ್ನಭಾಗ್ಯ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿ ಮಾಡದಿರಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಅವರು ಸ್ಪಷ್ಟಪಡಿಸಿದರು.
ರಾಜ್ಯ ಸಚಿವ ಸಂಪುಟ ಸಭೆಯ ನಂತರ ಮಾತನಾಡಿ, ಅನ್ನಭಾಗ್ಯ ಯೋಜನೆ ಯಥಾಸ್ಥಿತಿ ಮುಂದುವರಿಯಲಿದ್ದು, ಫುಡ್ ಕಿಟ್ ನೀಡುವ ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದರು.
ಫುಡ್ಕಿಟ್ ನೀಡುವ ಬದಲು ಫಲಾನುಭವಿಗಳಿಗೆ ಯಥಾವತ್ತು 170 ರೂಪಾಯಿಯನ್ನೇ ನೀಡುವುದನ್ನು ಮುಂದುವರಿಸುವ ಬಗ್ಗೆ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದರು ತಿಳಿಸಿದರು.
ಆಹಾರ ಇಲಾಖೆಯ ಪ್ರಾಸ್ತಾವನೆಯಂತೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮುಂದುವರಿಯಲಿದೆ. ಕೇಂದ್ರದಿಂದ ಅಕ್ಕಿ ಖರೀದಿಸುವ ಬದಲು, ನಾವು ಹೆಚ್ಚುವರಿ ಅಕ್ಕಿಯ ಬದಲಾಗಿ ಫಲಾನುಭವಿಗಳಿಗೆ ಹಣ ಕೊಡುತ್ತಿದ್ದೇವೆ. ಈ ಹಣ ಇತರ ಸಾಮಗ್ರಿ ಖರೀದಿಗೆ ಜನರಿಗೆ ಅನುಕೂಲ ಆಗಲಿದೆ. ಹೀಗಾಗಿ ಅಕ್ಕಿ ಬದಲು ಡಿಬಿಟಿ ಮೂಲಕ ಹಣವನ್ನೇ ಸರ್ಕಾರ ವರ್ಗಾವಣೆ ಮಾಡಲಿದೆ ಎಂದರು.