Ad imageAd image

‘ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರವಿ ಕುಮಾರ್ ಕಾರ್ಯ ಶ್ಲಾಘನೀಯ’

Bharath Vaibhav
‘ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರವಿ ಕುಮಾರ್ ಕಾರ್ಯ ಶ್ಲಾಘನೀಯ’
WhatsApp Group Join Now
Telegram Group Join Now

 ———————————————–ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿಕೆ

ಪಾವಗಡ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ, ನಿವೃತ್ತ ನೌಕರರಿಗೆ ಹಾಗೂ ಉತ್ತಮ ಸಾಧನೆಗೈದ ನೌಕರರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವನ್ನು ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯ ಸರ್ಕಾರಿ ನೌಕರರ ಹಿತಾಸಕ್ತಿಗಾಗಿ ಸಂಘ ಕೈಗೊಂಡ ಕಾರ್ಯವೈಖರಿ ಮತ್ತು ಸಾಧನೆಗಳನ್ನು ಹಾಗೂ ಸಂಘಟನೆಗಳ ಮುಖಾಂತರ ಹೋರಾಟಗಳನ್ನು ಮಾಡಿ ನಮ್ಮ ಬೇಡಿಕೆಗಳ ಸರ್ಕಾರದಿಂದ ತೆಗೆದುಕೊಳ್ಳಬೇಕು.
ಹಾಗೂ ಸಂಘಟನೆಯಲ್ಲಿ ಹಿತ ಶಕ್ತಿಯ ಕೆಲಸವನ್ನು ಮಾಡಿರುವಂತಹ ಇವತ್ತು ಈ ರೀತಿಯ ನೂತನ ಕಚೇರಿ ಉದ್ಘಾಟನೆ ಹಾಗೂ ನಮ್ಮನ್ನು ಮೆರವಣಿಗೆ ಮುಖಾಂತರ ಪಟ್ಟಣದಲ್ಲಿ ಮಾಡಿಸಿ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ನಡೆಸಿರುವ ಸಂಘದ ತಾಲೂಕಾಧ್ಯಕ್ಷ ರವಿ ಕುಮಾರ್ ರವರೆಗೆ ನನ್ನ ಕಡೆಯಿಂದ ವಂದನೆಗಳನ್ನು ತಿಳಿಸಿ ಇವರಿಗೆ ನಮ್ಮ ಸಂಘದಿಂದ ಗೌರವ ಸಿಗಬೇಕೆಂದು ನಾನು ಭಾವಿಸುತ್ತೇನೆ. ಪಾವಗಡ ತಾಲ್ಲೂಕಿನಲ್ಲಿ ಸರ್ಕಾರಿ ನೌಕರ ಸಂಘ ಕಚೇರಿ ಬಹಳ ಸುಂದರವಾಗಿ ನಿರ್ಮಿಸಿದ್ದಾರೆ. ಹಾಗೂ ಕರ್ನಾಟಕದಲ್ಲಿ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಇದೇ ರೀತಿಯಾಗಿ ಸಂಘದ ಕಚೇರಿ ಬಹಳ ಸುಂದರವಾಗಿ ನಿರ್ಮಿಸಬೇಕೆಂದು ತಿಳಿಸಿದ್ದಾರೆ.

ಇದೇ ಸಮಯದಲ್ಲಿ ಪಾವಗಡ ಪಟ್ಟಣದಲ್ಲಿ ಸಂಜೆ 5 ಗಂಟೆಗೆ ಪಟ್ಟಣದಲ್ಲಿ ಇರುವ ನಿರೀಕ್ಷಣಾದಿಂದ ಅಂಬೇಡ್ಕರ್ ವೃತ್ತದವರೆಗೆ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮೂಲಕ . ಶಾಸಕರಾದ ಎಚ್.ವಿ. ವೆಂಕಟೇಶ್ ಹಾಗೂ ರಾಜ್ಯಾಧ್ಯಕ್ಷ ಷಡಕ್ಷರಿ ಮೆರವಣಿಗೆಯಲ್ಲಿ ಪಾಲ್ಗೊಂಡು ನೌಕರರಿಗೆ ಉತ್ಸಾಹ ತುಂಬಿ ಕಾರ್ಯಕ್ರಮಕ್ಕೆ ಆಗಮಿಸಿದರು.

ಈ ವೇಳೆಯಲ್ಲಿ ಕಾರ್ಯಕ್ರಮದಲ್ಲಿ. ಮಧುಗಿರಿ ಎಸಿ ಗೋಟೂರು ಶಿವಪ್ಪ,ತಹಸೀಲ್ದಾರ್ ವರದರಾಜು, ನೌಕರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ರವಿಕುಮಾರ್. ಇಓ ಉತ್ತಮ,
ಪಾವಗಡ ಪುರಸಭಾ ಅಧ್ಯಕ್ಷ ಸುದೇಶ್ ಬಾಬು, ಬಿಇಒ ರೇಣುಕಮ್ಮ, ತಾಲ್ಲೂಕು ಶಾಖೆ ನೌಕರ ಸಂಘದ ಹಿರಿಯ ಉಪಾಧ್ಯಕ್ಷ ನಾಗರಾಜ್. ಪ್ರಧಾನ ಕಾರ್ಯದರ್ಶಿ ತಾಲೂಕ್ ಖಜಾಂನ್ಸಿ. ಶಂಕರ್ ಬಾಬು. ಎಸ್.ಎಸ್.ಕೆ ಅಧ್ಯಕ್ಷ ಜಿ. ಅನಿಲ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸೇರಿದಂತೆ ಹಾಜರಿದ್ದರು.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!