ಕುಷ್ಟಗಿ:- ಸರಕಾರಿ ಪ್ರೌಢಶಾಲೆ ಹಿರೇಬನ್ನಿಗೋಳ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು,ಸಾರ್ವತ್ರಿಕ ಚುನಾವಣೆಯ ಮಾದರಿಯಂತೆ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಲಾಯಿತು.ವಿದ್ಯಾರ್ಥಿಗಳಿಗೆ ಮತಯಂತ್ರದಲ್ಲಿ ಮತ ಚಲಾಯಿಸಯವ ಬಗೆ ತಿಳಿಸಲಾಯಿತು.ನಮ್ಮಮತ ನಮ್ಮ ಹಕ್ಕು ಎನ್ನುವ ಹಾಗೆ ಮತದಾನದ ಮಹತ್ವ ತಿಳಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಹಾಂತೇಶ ಜಾಲಿಗಿಡದ ಅವರು ಶಾಲಾ ಸಂಸತ್ತು ಚುನಾವಣೆಯ ಅಧಿಕಾರಿಗಳಾಗಿದ್ದರು.ಚುನಾವಣೆಯ ಅಧ್ಯಕ್ಷದಿಕಾರಿಯಾಗಿ.ಶ್ರೀ ಶಿವಕುಮಾರ್ ಗೋಣಿ,ಮೊದಲ ಪೋಲಿಂಗ ಅಧಿಕಾರಿಯಾಗಿ ಶ್ರೀ ಮಹೇಶ ಬಿಸನಾಳ, ಎರಡನೇ ಪೋಲಿಂಗ್ ಅಧಿಕಾರಿಯಾಗಿ ಶ್ರೀ ಶರಣಪ್ಪ ಸ.ಶಿ. ಚುನಾವಣೆಯ ವಿಡೀಯೋ ಗ್ರಾಪರ್ ಶ್ರೀ ಚೇತನಗೌಡ ಗೌಡ್ರು ಸ.ಶಿ. ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು.
ಮತ ಚಲಾಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಧನ್ಯವಾದಗಳು.ಚುನಾವಣೆಯಲ್ಲಿ ಅಯ್ಕೆಯಾದ ವಿಧ್ಯಾರ್ಥಿಗಳಿಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಮತ್ತು ಮುಖ್ಯೋಪಾಧ್ಯಾಯರಾದ ಶ್ರೀ ಮಹಾಂತೇಶ ಜಾಲಿಗಿಡದದ ಅವರು ಅಭಿನಂದಸಿದ್ದಾರೆ.
ವರದಿ:- ಶಿವಯ್ಯ ಕೆಂಭಾವಿಮಠ