ಚಡಚಣ :-ತಾಲೂಕಿನ ಕಟ್ಟ ಕಡೆಯ ಹಳ್ಳಿಯಾದ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮ ಉಮರಜ ಈ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೈದಾನಕ್ಕೆ ಹಣ ಮಂಜೂರಾತಿಯಾಗಿದ್ದು ಅಲ್ಪಸ್ವಲ್ಪ ಕೆಲಸ ಮಾಡಿ ಎಲ್ಲ ದುಡ್ಡು ಗುಳುಂ ಸಹ ಮಾಡಿದ ಉಮರಜ ಗ್ರಾಮದ ಪಂಚಾಯತಿ ಅಧಿಕಾರಿ ಲಾಲಾಸಾಬ್ ನದಾಫ್ ಬಕಾಸುರ ಹೈ ಟೆಕ್ ಶೌಚಾಲಯ ಎಂದು ಕಳಪೆ ಕಾಮಗಾರಿ ಮಾಡಿದ 7 ಲಕ್ಷ ಹಣ ಮಂಜುರಿ ಬಂದಿದ್ದು ಅರ್ಧಂಬರ್ದ ಕೆಲಸ ಮಾಡಿ ಉಳಿದ ಹಣ ಗುಳುಂ ಸ್ವಹ ಮಾಡಿದ ಬಕಾಸುರ ಪಂಚಾಯಿತಿ ಅಧಿಕಾರಿ ಲಾಲಸಾಬ್ ನದಾಫ್
ಶೌಚಾಲಯಕ್ಕೆ ಹೋಗಬೇಕಾದರೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಂದೇ ದಾರಿ ಒಂದೇ ಗೇಟು ಹೀಗಾದರೆ ವಿದ್ಯಾರ್ಥಿನಿಯರು ಮೂತ್ರ ವಿಸರ್ಜನೆ ಎಲ್ಲಿ ಹೋಗಬೇಕು ಅಷ್ಟು ತಿಳಿಯದ ಪಂಚಾಯಿತಿ ಅಧಿಕಾರಿ ಲಾಲಸಾಬ್ ನದಾಫ್ ಎರಡು ಶೌಚಾಲಯ ಒಂದು ಕಡೆ ಕಟ್ಟಿದ್ದಾನೆ ಅದರಂತೆ ವಾಲಿಬಾಲ್ ಮೈದಾನಕ್ಕೆ 5 ಲಕ್ಷ 40,000, ಬಾಸ್ಕೆಟ್ ಬಾಲ್ ಮೈದಾನಕ್ಕೆ 5 ಲಕ್ಷ 57,000, ಖೋ ಖೋ ಆಟದ ಮೈದಾನಕ್ಕೆ 3 ಲಕ್ಷ 6000 ಮಂಜೂರಿಯಾಗಿದೆ ಆದರೆ ಮೈದಾನದ ಕೆಲಸಕ್ಕೆ ಹಣ ಕೇವಲ ಎರಡು ರಿಂದ ಮೂರು ಲಕ್ಷ ಹಣದಲ್ಲಿ ಮೈದಾನವನ್ನು ಕಳಪೆ ಮಟ್ಟದಲ್ಲಿ ಸಜ್ಜುಗೊಳಿಸಿ ಉಳಿದ ಹಣವೆಲ್ಲ ಗುಳುಂ ಸ್ವಹ ಮಾಡಿದ ಉಮರಾಜ ಗ್ರಾಮದ ಪಂಚಾಯತಿ ಅಧಿಕಾರಿ ಲಾಲಸಾಬ್ ನದಾಫ್
ಸರ್ಕಾರಿ ಪ್ರೌಢಶಾಲೆಯ ಆಟದ ಮೈದಾನ ತಿಪ್ಪೆ ಗುಂಡಿಯಾಗಿ ಕಾಣುತೈತ್ರಿ ಹೊಲದ ರಾಶಿ ಯಲ್ಲ ತಂದು ಈ ಮೈದಾನದಲ್ಲಿ ಮಾಡುತ್ತಾರೆ ಗ್ರಾಮಸ್ಥರು ಎಮ್ಮೆ ದನಕರಗಳು ಕಟ್ಟುವುದು ವಾಹನಗಳ ನಿಲುಗಡೆ ಮಾಡುವುದು ವಾಹನ ಪಾರ್ಕಿಂಗ್ ಆಗಿದೆ ಈ ಮೈದಾನ ರಾತ್ರಿ ಹೊತ್ತು ಗ್ರಾಮದ ಜನರಿಗೆ ಸರಾಯಿ ಕುಡಿಯುವ ಸ್ಥಳವಾಗಿದೆ ಈ ಸರ್ಕಾರಿ ಪ್ರೌಢಶಾಲೆಗೆ ಸರಿಯಾದ ಕಾಂಪೌಂಡ್ ಕೂಡ ಇಲ್ಲ ಇದಕ್ಕೆ ಒಂದು ಸರಿಯಾಗಿ ಗೇಟು ಕೂಡ ಇಲ್ಲ ಇದೆ ಕಾರಣದಿಂದ ಮೈದಾನವನ್ನು ಗ್ರಾಮದ ಜನರು ಒತ್ತುವರಿ ಮಾಡಿಕೊಂಡು ಹೋದರೆ ಮುಂದೊಂದು ದಿನ ಶಾಲೆಯ ಮೈದಾನವನ್ನು ಹುಡುಕುಬೇಕಾಗುತ್ತದೆ
ಸರ್ಕಾರಿ ಪ್ರೌಢ ಶಾಲೆಯ ಆವರಣದ ಜಾಗ ಎಷ್ಟಿದೆ ಎಂದು ಯಾರಿಗೂ ಗೊತ್ತಿಲ್ಲ ಮಳೆ ಬಂದಾಗ ಶಾಲೆಯ ಕೋಣಿಗಳೆಲ್ಲ ನೀರಿನಿಂದ ಹನಿ ಹನಿಯಾಗಿ ಎಲ್ಲಾ ಕಟ್ಟಡಗಳು ಸೇರುತ್ತವೆ ವಿದ್ಯಾರ್ಥಿಗಳೆಲ್ಲ ನಿಲ್ಲುವಂತ ಪರಿಸ್ಥಿತಿ ಇದೆ ಶಿಕ್ಷಕರು ಉಪನ್ಯಾಸ ಮಾಡುವಾಗ ಅವರ ತಲೆ ಮೇಲೆ ನೀರಿನ ಹನಿ ಹನಿಯಾಗಿ ಸೋಲುತ್ತಿವೆ ಹೀಗಾದರೆ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದಾದರೂ ಹೇಗೆ ಇದರ ದುರಸ್ತಿ ಯಾರು ಮಾಡಬೇಕು
ಸರ್ಕಾರಿ ಪ್ರೌಢಶಾಲೆಯ ಉಮರಜ 225 ವಿದ್ಯಾರ್ಥಿಗಳು ಆದರೆ ಶಾಲೆ ಶಿಕ್ಷಕರ ಸಿಬ್ಬಂದಿ ಸಂಖ್ಯೆಮೂರು ಜನ ಶಿಕ್ಷಕರು ಇನ್ನೊಬ್ಬರು ಕ್ರೀಡೆಯ ಶಿಕ್ಷಕರು ಇದ್ದಾರೆ ಇಲ್ಲಿ ಇನ್ನೂ ಮೂರು ಜನರ ಶಿಕ್ಷಕರ ಕೊರತೆ ಇದೆ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ಚಿದಾನಂದ ಭೂಪಾಲಿ ಈ ಸರ್ಕಾರಿ ಪ್ರೌಢಶಾಲೆಗೆ ಅನ್ಯಾಯವಾಗಿದೆ ಎಂದು ಇವರು ನೋವನ್ನು ಹೇಳಿ ಲಾಲಸಾಬ್ ನದಾಫ್ ಪಿಡಿಓ ಮಾಡಿದ ದುರಂತವನ್ನು ವಿಸ್ತರಿಸಿದರು. ಮತ್ತು ಇತ್ತ ಕಡೆ ತಾಲೂಕ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಸರ್ಕಾರಿ ಪ್ರೌಢಶಾಲೆಯ ಮೈದಾನದ ಬಗ್ಗೆ ತನಿಖೆ ಮಾಡಿ ನ್ಯಾಯ ಒದಗಿಸಿ ಕೊಡಬೇಕೆಂದು ಇಲ್ಲಿನ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು .
ವರದಿ:- ಉಮಾಶಂಕರ ಕ್ಷತ್ರಿ