Ad imageAd image

ಸರಕಾರಿ ಶಿಕ್ಷಕರು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವ್ಯಕ್ತಿಗಳ ಪರ ಸ್ಟೇಟಸ್ ಹಾಕುತ್ತಿರುವ ವಿರುದ್ಧ ಕ್ರಮಕ್ಕೆ ಆಗ್ರಹ

Bharath Vaibhav
ಸರಕಾರಿ ಶಿಕ್ಷಕರು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವ್ಯಕ್ತಿಗಳ ಪರ ಸ್ಟೇಟಸ್ ಹಾಕುತ್ತಿರುವ ವಿರುದ್ಧ ಕ್ರಮಕ್ಕೆ ಆಗ್ರಹ
WhatsApp Group Join Now
Telegram Group Join Now

 

ಸೇಡಂ: ತಾಲೂಕಿನ ಸರಕಾರಿ ಮತ್ತು ಆರೆ ಸರಕಾರಿ ಶಿಕ್ಷಕರು ರಾಜಕೀಯ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡು ರಾಜ್ಯಕೀಯ ವ್ಯಕ್ತಿಗಳ ಬಗ್ಗೆ ಹಾಗೂ ಪಕ್ಷಗಳ ಬಗ್ಗೆ ಪ್ರಚಾರ ಮಾಡುತ್ತಿದ್ದು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಾಜಕೀಯ ವ್ಯಕ್ತಿಗಳ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಗಳಲ್ಲಿ ಸ್ಟೇಟಸ್ ಹಾಗೂ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇದು ಕರ್ನಾಟಕ ನಾಗರಿಕ ಸೇವಾ “ನಡವಳಿಕಾ” ನಿಯಮಗಳು, 1966 ರ ನಿಯಮ 5ಕ್ಕೆ ಸ್ಪಷ್ಟ ಉಲ್ಲಂಘನೆಯಾಗುತ್ತದೆ.

ಸರಕಾರಿ ಶಿಕ್ಷಕರು ರಾಜಕೀಯವಾಗಿ ತಟಸ್ಥರಾಗಿರಬೇಕಾದ ಕರ್ತವ್ಯ ಹೊಂದಿದ್ದು, ಇಂತಹ ವರ್ತನೆ ಸಾರ್ವಜನಿಕ ಸೇವೆಯ ಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಗೋಪಾಲ ನಾಟೆಕರ್ ರವರು ತಿಳಿಸಿದ್ದಾರೆ.

ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಪರಿಶೀಲಿಸಿ, ಸಂಬಂಧಿಸಿದ ಸರಕಾರಿ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಮತ್ತು ಇಂತಹ ಕೃತ್ಯಗಳು ಮುಂದುವರಿಯದಂತೆ ಸೂಕ್ತ ನಿರ್ದೇಶನ ನೀಡಿ ಆದೇಶ ಮಾಡಬೇಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷರು ಗೋಪಾಲ ಎಲ್ ನಾಟೆಕರ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷರು ಈಶ್ವರಾಜ ಮಾಧವರ ಹಾಗೂ ಭೀಮು ಮಲ್ಕಪಲ್ಲಿ ಗ್ರಾಮ ಘಟಕ ಅಧ್ಯಕ್ಷರು ಇದ್ದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!