ರಾಜ್ಯಪಾಲರಾದ ಥಾವರಚಂದ ಗೆಹೇಲೋಟ್ ರಾಜೀನಾಮೆ ನೀಡಬೇಕು

Bharath Vaibhav
ರಾಜ್ಯಪಾಲರಾದ ಥಾವರಚಂದ ಗೆಹೇಲೋಟ್ ರಾಜೀನಾಮೆ ನೀಡಬೇಕು
WhatsApp Group Join Now
Telegram Group Join Now

ಹಾವೇರಿ:-ಇದು ಶಿಗ್ಗಾಂವಿಯಲ್ಲಿ ನಡೆದ ಕಾಂಗ್ರೇಸ್ ಪಕ್ಷದ ನಾಯಕರ ಪ್ರತಿಭಟನೆ ರಾಜೀನಾಮೆ ನೀಡದಿದ್ದಲ್ಲಿ ರಾಜ್ಯ ಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ನೆಚ್ಚಿನ ನಾಯಕ ಯಾಸಿರ್ ಅಹ್ಮದ್ ಪಠಾಣ ಹೇಳಿದರು.

 

ಕರ್ನಾಟಕದ ನೆಚ್ಚಿನ ನಾಯಕ ಸಿದ್ದರಾಮಯ್ಯನವರ ಮೇಲೆ ಮಾಡಿದ ಅಪರಾಧ ಮರಳಿ ಪಡಿಯಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆಹೌದು ಇಂದು ಶಿಗ್ಗಾoವನಲ್ಲಿ ಕಿತ್ತೂರ್ ರಾಣಿ ಚನ್ನಮ್ಮಾ ಸರ್ಕಲ್ ನಲ್ಲೀ
ಸಾವಿರಾರಾರು ಕಾಂಗ್ರೆಸ್ ಕಾರ್ಯಕರ್ತರು ಬಿ ಜೆ ಪಿ ವಿರುದ್ದ ಬೃಹತ್ ಪ್ರತಿಭಟನೆ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಯಾಸಿರ್ ಅಹ್ಮದ್ ಖಾನ್ ಪಠಾನ್ ಮಾತನಾಡಿ
ಕಾಂಗ್ರೆಸ್ ಸರ್ಕಾರವು ಆಫರೇಷನ್ ಕಮಲದಂತಹ ವಾಮ ಮಾರ್ಗದಲ್ಲಿ ಹುಟ್ಟಿದ ಅನ್ಯತಿಕ ಕುಸಲ್ಲಾ ಅಥವಾ ರಾಜಕೀಯ ಬಿಕ್ಕಟ್ಟನ್ನು ಬಳಸಿ ರಚನೆಯಾದ ಅವಕಾಶವಾದಿ ಸರಕಾರವಲ್ಲಾ ಏಳು ಕೋಟಿ ಕನ್ನಡಿಗರ ಆಶೀರ್ವಾದದಿಂದ ರಚನೆಯಾದ ಸರ್ಕಾರ ಇದು ಯಾವ ಷಡ್ಯಂತರಗಳಿಗೂ ನಮ್ಮ ಸರಕಾರವನ್ನು ಉರುಳಿಸುವ ಮುಖ್ಯಮಂತ್ರಿಗಳನ್ನು ಮುಟ್ಟುವ ತಾಖತ್ ಬಿಜೆಪಿ ಯವರಿಗಿಲ್ಲಾ ಎಂದು ಎಚ್ಚರಿಕೆ ನೀಡಿದರು.

ಅದೇ ವೇಳೆ ನ್ಯಾಯವಾದಿಗಳಾದ ಮಾಂತೇಶ್ ಸಾಲಿ ಮಾತನಾಡಿ ನೈತಿಕವಾಗಿಯೂ ಕಾನೂನಾತ್ಮಕವಾಗಿಯೂ ಸರಿ ದಾರಿಯಲ್ಲಿರುವ ಸಿದ್ದರಾಮಯ್ಯರನ್ನು ಕುಗ್ಗಿಸಲು ನಿಮ್ಮಂತ ಹೇಡಿಗಳಿಂದ ಸಾಧ್ಯವಿಲ್ಲ ಎಂದು ಹೇಳಿದರು.ಒಂದೇ ಒಂದು ಹಗರಣ ಇಲ್ಲದೆ ಇವತ್ತಿನ ರಾಜ್ಯ ಕಾರಣಿಗಳಿಗೆ ಮಾದರಿ ಆಗಿದ್ದಾರೆ ಬುದ್ಧ ಬಸವ ಅಂಬೇಡ್ಕರ್ ಅವರ ನಿಲುವುಗಳನ್ನು ಹೊಂದಿರುವ ಸಿದ್ದರಾಮಯ್ಯ ನವರನ್ನು ಮುಟ್ಟಿದರೆ ಬಸ್ಮ ಆಗಿ ಹೋಗುತ್ತೀರಿ ಹುಷಾರ್ ಎಂದು ಗುಡುಗಿದರು.

ಈ ಸಂದರ್ಭದಲ್ಲಿ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಂಜೀವ್ ಕುಮಾರ್ ನೀರಲಗಿ. ಕಾಂಗ್ರೆಸ್ ಮುಖಂಡ ಯಾಸಿರ್ ಅಹ್ಮದ್ ಪಠಾಣ್ .
ಮಾಜಿ ಎಂ ಎಲ್ ಸಿ,ಸೊಮ್ಮಣ್ಣ ಬೆವಿನಮರದ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜು. ಎಂ. ಕುನ್ನೂರ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಸಿ ಪಾಟೀಲ್
ಕೆ ಡಿ ಪಿ ಸದಸ್ಯರಾದ ಆಜೀಜ್ ಎಡ್ಡಳ್ಳಿ ಜೀ ಪೀ ಮೆಂಬರ್ ಯುನೂಸ ಕಲ್ಯಾಣ, ನ್ಯಾಯವಾದಿ ಮಾಂತೇಶ್ ಸಾಲಿ  ಪುರಸಭೆ ಸದಾಸ್ಯರಾದ ಗೌಸ್ ಖಾನ್ ಮುನ್ಸಿ,ಇನ್ನು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ:-ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!