2400 ಕೆ.ಎಸ್.ಆರ್.ಪಿ. ಪೋಲೀಸರ ನೇಮಕಾತಿಗೆ ಸರ್ಕಾರ ಆದೇಶ 

Bharath Vaibhav
2400 ಕೆ.ಎಸ್.ಆರ್.ಪಿ. ಪೋಲೀಸರ ನೇಮಕಾತಿಗೆ ಸರ್ಕಾರ ಆದೇಶ 
vidhana soudha
WhatsApp Group Join Now
Telegram Group Join Now

ಬೆಂಗಳೂರು: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ ಇಲ್ಲಿದೆ. 2400 ಕೆ.ಎಸ್.ಆರ್.ಪಿ. ಪೋಲೀಸರ ನೇಮಕಾತಿಗೆ ಸರ್ಕಾರ ಆದೇಶಿಸಿದೆ.

ಸಶಸ್ತ್ರ ಮೀಸಲು ಪಡೆಯ ಎರಡು ಹೊಸ ಬೆಟಾಲಿಯನ್ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ದೇವನಹಳ್ಳಿ ಮತ್ತು ಕೆಜಿಎಫ್ ಬಳಿ 2,400 ಪೊಲೀಸರ ಬಲವುಳ್ಳ ಎರಡು ಬೆಟಾಲಿಯನ್ ಆರಂಭಕ್ಕೆ ಅಧಿಕೃತವಾಗಿ ಶುಕ್ರವಾರ ಸರ್ಕಾರ ಆದೇಶಿಸಿದೆ.

ಪ್ರಸ್ತುತ 12 ಕೆ.ಎಸ್.ಆರ್.ಪಿ., ಎರಡು ಐ.ಆರ್.ಬಿ. ಬೆಟಾಲಿಯನ್ ಗಳು ಇದ್ದು, ಮತ್ತಷ್ಟು ಬೆಟಾಲಿಯನ್ ಆರಂಭಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರ ಸಮ್ಮತಿಸಿದೆ.

ದೇವನಹಳ್ಳಿ ಸಮೀಪ ನೂರು ಎಕರೆ, ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನಲ್ಲಿ 50 ಎಕರೆ ಜಾಗದಲ್ಲಿ ಹೊಸ ಬೆಟಾಲಿಯನ್ ಆರಂಭಿಸಲಿದ್ದು, ಇಲ್ಲಿ ತಲಾ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ 2400 ಪೊಲೀಸರ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!