Ad imageAd image

ಸರ್ಕಾರ ರಾಯಭಾರಿ ಮಾಡುವ ಮುನ್ನ ಪರಾಮರ್ಶೆ ಮಾಡಬೇಕು

Bharath Vaibhav
ಸರ್ಕಾರ ರಾಯಭಾರಿ ಮಾಡುವ ಮುನ್ನ ಪರಾಮರ್ಶೆ ಮಾಡಬೇಕು
WhatsApp Group Join Now
Telegram Group Join Now

ಹುಬ್ಬಳ್ಳಿ:-ನಟ ದರ್ಶನ್ ಅವರನ್ನು ಈ ಹಿಂದೆ ರಾಜ್ಯ ಸರ್ಕಾರ ರೈತರ ರಾಯಭಾರಿಯನ್ನಾಗಿ ಮಾಡಿದ್ದು, ಆದರೆ ದರ್ಶನ್ ಪ್ರಕರಣವೊಂದರಲ್ಲಿ ಹೆಸರು ಕೇಳಿ ಬಂದಿದ್ದು, ಸರ್ಕಾರ ರಾಯಭಾರಿಗಳನ್ನು ನೇಮಿಸುವ ಮುನ್ನ ಪರಾಮರ್ಶೆ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಶನ್ ಅವರು ರಾಜ್ಯದ ಚಲನಚಿತ್ರ ನಟರಾಗಿದ್ದು, ಸಮಾಜದಲ್ಲಿ ಒಂದು ಸ್ಥಾನಕ್ಕೆ ಬಂದ ಮೇಲೆ ಮಾದರಿಯ ನಡೆಯನ್ನು ಅನುಕರಣೆ ಮಾಡಬೇಕಿತ್ತು, ಯಾವುದೋ ಒಂದು ಸಂದೇಶಗೋಸ್ಕರವಾಗಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ನಟರಾಗಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕೆಲಸವನ್ನು ಮಾಡಬೇಕು. ಆದರೆ ಇತ್ತಿಚಿನ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯವೇ ತಲೆತಗ್ಗಿಸುವಂತಹ ಘಟನೆಗಳು ನಡೆಯುತ್ತಿದ್ದು, ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಮುಂದಾದರೂ ಕೂಡಾ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಉತ್ತಮ ದಾರಿಯಲ್ಲಿ ನಡೆದು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರಕರಣವೊಂದರಲ್ಲಿ ದರ್ಶನ್ ಹೆಸರು ಕೇಳಿ ಬಂದಿರುವುದರಿಂದ ಈ ಹಿಂದೆ ಕೃಷಿಗೆ ಸಂಬಂಧಿಸಿದಂತೆ ಅವರನ್ನು ರಾಯಭಾರಿಯನ್ನಾಗಿ ಸರ್ಕಾರ ಮಾಡಿತ್ತು, ಇದೀಗ ಇಂತಹ ಘಟನೆಯಿಂದಾಗಿ ಸರ್ಕಾರಕ್ಕೂ ಇರಿಸುಮುರುಸು ಆಗುತ್ತಿದೆ ಎಂದವರು ಹೇಳಿದರು.

ವೆರದಿ:-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
Share This Article
error: Content is protected !!