Ad imageAd image

ಗ್ರಾ.ಪಂ ಸದಸ್ಯ ಹನುಮಂತರಾಯಪ್ಪ ವಿರುದ್ದ ಗ್ರಾ.ಪಂ ಅಧ್ಯಕ್ಷ ರೂಪಾ ನಾಗರಾಜ್ ಆರೋಪ ಸಲ್ಲದು

Bharath Vaibhav
ಗ್ರಾ.ಪಂ ಸದಸ್ಯ ಹನುಮಂತರಾಯಪ್ಪ ವಿರುದ್ದ ಗ್ರಾ.ಪಂ ಅಧ್ಯಕ್ಷ ರೂಪಾ ನಾಗರಾಜ್ ಆರೋಪ ಸಲ್ಲದು
WhatsApp Group Join Now
Telegram Group Join Now

ತುಮಕೂರು : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ದಿನಾಂಕ 28/02/25 11:30ಕ್ಕೆ ಶುಕ್ರವಾರ ಪಿ ರೊಪ್ಪಾ ಗ್ರಾಮಪಂಚಾಯಿತಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಪಿ ರೊಪ್ಪಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಸದಸ್ಯರುಗಳು ಪ್ರತಿಕ್ರಿಯಿಸಿ ಮಾತನಾಡಿದರು

ಪಾವಗಡ: ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಪಿ.ರೊಪ್ಪಾ ಗ್ರಾಮ ಪಂಚಾಯಿತಿ ವಿರುದ್ದ ಗ್ರಾ.ಪಂ ಸದಸ್ಯನ ಇಲ್ಲ ಸಲ್ಲದು ಆರೋಪ ಸತ್ಯಕ್ಕೆ ದೂರವಾಗಿದೆ. ವಿನಾಕಾರಣ ಆರೋಪ ಸಲ್ಲದು ಎಂದು ಗ್ರಾ.ಪಂ ಅಧ್ಯಕ್ಷೆ ರೂಪಾ ನಾಗರಾಜ್ ತಿಳಿಸಿದ್ದಾರೆ.

ಗ್ರಾ.ಪಂ ಸದಸ್ಯ ಹನುಮಂತರಾಯಪ್ಪ ಕಳೆದ ಎಂಟು ದಿನಗಳಿಂದ ಗ್ರಾ.ಪಂನಲ್ಲಿ ಬ್ರಷ್ಠಾಚಾರ ನಡೆದಿರುವ ಬಗ್ಗೆ ತನಿಖೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅಧ್ಯಕ್ಷೆ ಸೇರಿದಂತೆ ಸದಸ್ಯರು ಮುಂದುವರಿದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 56 ಎಕರೆ ಭೂ ಪರಿವರ್ತನೆಯಾಗಿ ವಸತಿ ಬಡಾವಣೆಗೆ ಅನುಮತಿ ಕೂರಿ ಅರ್ಜಿಗಳನ್ನು ನಿಡಲಾಗಿತ್ತು. 53 ಎಕರೆಯನ್ನು ಗ್ರಾ.ಪಂನಲ್ಲಿ ಸಾಮಾನ್ಯ ಸಭೆಯನ್ನು ಹಮ್ಮಿಕೊಂಡು ಸದಸ್ಯರ ಅನಿಮತಿಯಿಂದ ಅನುಮೋದಿಸಲಾಗಿದೆ.

ಉಳಿದ 3 ಎಕರೆಯ ಬಡಾವಣೆಗೆ ಅನುಮೊದನೆ ತಡೆಹಿಡಿಯುವಂತೆ ತಕರಾರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅನುಮೊದಿಸದೆ ತಡೆಹಿಡಿಯಲಾಗಿತ್ತು. ಆದ್ದರಿಂದ ಗ್ರಾ.ಪಂ ವಿರುದ್ದ, ನನ್ನ ವಿರುದ್ದ ಹಾಗೂ ನಮ್ಮ ಮಾವನಾದ ದೇವರಾಜ್ ವಿರುದ್ದ ಅನುಮೊದನೆಗೆ ಲಂಚ ಕೇಳುತ್ತಿದ್ದಾರೆಂದು ಆರೋಪಿಸಿ ಕಳೆದ ಎಂಟು ದಿನಗಳಿಂದ ಗ್ರಾ.ಪಂ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಸ್ಪಷ್ಠಿಕರಿಸಿದ್ದಾರೆ.

ಗ್ರಾ.ಪಂ ಮಾಜಿ ಅಧ್ಯಕ್ಷ ಬೊಮ್ಮತ ನಹಳ್ಳಿ ರಾಮಾಂಜಿನಪ್ಪ ಮಾತನಾಡಿ ಗ್ರಾ.ಪಂ ಸದಸ್ಯ ಹಾಗೂ ಪತ್ರಿಕಾ ಸಂಘದ ಅಧ್ಯಕ್ಷ ಹನುಮಂತರಾಯಪ್ಪ ತನ್ನ ವ್ಯಾಪ್ತಿಗೆ ಬರುವ ಗ್ರಾಮದ ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಹಾಗೂ ತನ್ನನ್ನು ಮತ ಚಲಾಯಿಸಿ ಗೆಲ್ಲಿಸದಂತ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಒಂದು ದಿನವೂ ಪ್ರತಿಭಟಿಸದೇ, ರಿಯಲ್ ಎಸ್ಟೇಟ್ ವ್ಯಕ್ತಿಯಿಂದ ಹಣ ಪಡೆದು ಗ್ರಾ.ಪಂ ನಲ್ಲಿ ದಳ್ಳಾಳಿಯಂತೆ ಕೆಲಸ ಮಾಡುತ್ತಿದ್ದಾರೆ. ಇವರು ಗ್ರಾ.ಪಂ ಸದಸ್ಯರ ಅಥವಾ ರಿಯಲ್ ಎಸ್ಟೇಟ್ ವ್ಯಕ್ತಿಗಳ ದಳ್ಳಾಳಿನ ಎಂಬುದು ನಮಗೆ ತಿಳಿಯುತ್ತಿಲ್ಲವೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರುಗಳಾದ ನಾಗಮಣಿ ಮೂರ್ತಿ, ಲಕ್ಷ್ಮೀನಾರಾಯಣ, ವೆಂಕಟೇಶ್, ಅನಿಲ್ ಇದ್ದರು.

ವರದಿ: ಶಿವಾನಂದ  ಪಾವಗಡ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!