ಸೇಡಂ:-ತಾಲೂಕಿನ ಸಿಲಾರಕೂಟ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಉಪಾಧ್ಯಕ್ಷರಾದ ಬಿಜೆಪಿ ಮುಖಂಡರು ಡಾ. ಮಧುಸೂಧನ್ ರೆಡ್ಡಿ ಅವರು ಬೇಟಿ ನೀಡಿ ಸ್ವಚ್ಚತೆ, ಶಿಕ್ಷಣ, ಬಿಸಿಯೂಟ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
ಮಾಹಿತಿ ಪಡೆದ ನಂತರ ಶಾಲೆಗಳ ಸುತ್ತಮುತ್ತಲಿನ ಸ್ವಚ್ಚತೆಯನ್ನು ನಾಳೆಯೇ ಸ್ಪಚ್ಚಗೊಳಿಸುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಗೆ ನಮ್ಮ ಮಾತೃಭಾಷೆ ಸರಿಯಾಗಿ ಓದಲು ಬರುವುದಿಲ್ಲ ಎಂದು ಅವರು ಮಾಹಿತಿ ಪಡೆದು.ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮುಂದು ಇರಬೇಕು ಮಕ್ಕಳಿಗೆ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಉತ್ತಮ ಶಿಕ್ಷಣ ನೀಡಿ ಎಂದು ಶಿಕ್ಷಕರಿಗೆ ಸೂಚಿಸಿದರು.
ಈ ಬಿಸಿಯೂಟ ಸಮಯದಲ್ಲಿ ನೀರು ಶಾಲೆಯ ಆವರಣದಲ್ಲಿ ಜಮ ಆಗುವಂತೆ ಮಾಡುವುದು ಸರಿಯಲ್ಲ ನಮ್ಮ ಸ್ವಚ್ಚತೆಯನ್ನು ನಾವೇ ಕಾಪಾಡುಕೋಬೇಕು ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚತೆಯನ್ನು ಕಾಪಾಡಿ ಎಂದು ಹೇಳಿದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಮದ್ಯ ಸೇವನೆ ಮಾಡಿ ಬಾಟಲ್ ಗಳು ಅಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಶಾಲೆಯ ಬಾಗಿಲಗಳನ್ನು ಹೊಡೆದು ಹಾಕುತ್ತಿದ್ದಾರೆ, ಗ್ರಾಮದ ಬಿಟ್ ಪೊಲೀಸ್ ಅಧಿಕಾರಿಗಳು ಗಮನ ವಹಿಸಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ. ಮಧುಸೂಧನ್ ರೆಡ್ಡಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಈರಪ್ಪ ಪೂಜಾರಿ, ಹಿರಿಯ ಪ್ರಾಥಮಿಕ ಶಾಲೆಯ ರಮೇಶ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಸಾಬಪ್ಪ ಅಬ್ಬಗಳ ಸೇರಿದಂತೆ ಇನ್ನಿತರರು ಇದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.