Ad imageAd image

ಕರೋಶಿ ಗ್ರಾಮದ ವಿವಿದ ಉದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಸಭೆ

Bharath Vaibhav
ಕರೋಶಿ ಗ್ರಾಮದ ವಿವಿದ ಉದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಸಭೆ
WhatsApp Group Join Now
Telegram Group Join Now

ಚಿಕ್ಕೋಡಿ:-ಕರೋಶಿ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಯೋಗದಲ್ಲಿ ಬರುವ ದಿನಗಳಲ್ಲಿ ಗ್ಯಾಸ್ ಏಜೇನ್ಸಿ ಹಾಗೂ ಪೆಟ್ರೋಲ್ ಪಂಪ್ ಪ್ರಾಂಭಿಸುವ ಗುರಿ ಹೊಂದಿದ್ದೇವೆ ಎಂದು ಅಧ್ಯಕ್ಷ ಹಾಗೂ ಚಂದರಗಿ ಕ್ರೀಡಾ ಶಾಲೆ ಉಪಾಧ್ಯಕ್ಷ ಮಹೇಶ ಭಾತೆ ಹೇಳಿದರು.

ಅವರು ಕರೋಶಿ ಗ್ರಾಮದ ಪಿಕೆಪಿಎಸ್ ಸಹಕಾರಿ ಸಂಸ್ಥೆಯು ವಿವಿಧೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಆಗಿ ಪರಿವರ್ತನೆಗೊಂಡ ೧೦೩ ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕವಾಗಿ ಸಂಸ್ಥೆಯನ್ನು ಬೇರೆ,ಬೇರೆ ಆಯಾಮಗಳಲ್ಲಿ ಪರಿವರ್ತನೆಗೊಳಿಸಿ ಒಂದೇ ಸೂರಿನಡಿ ರೈತರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವ ವ್ಯವಸ್ಥೆ ಮಾಡಲು ಯೋಜನೆಗಳನ್ನು ಸಂದರ್ಭಕ್ಕೆ ತಕ್ಕಂತೆ ರೂಪಿಸಲಾಗುತ್ತಿದೆ ಎಂದರು.

ಸಹಕಾರಿ ಸಂಸ್ಥೆಯ ಲಾಭಾಂಶವನ್ನು ಇತಿಮಿತಿಯಲ್ಲಿ ಸದಸ್ಯರಿಗೆ ನೀಡುವ ಮೂಲಕ ಕಾಯ್ದಿಟ್ಟ ನೀದಿಯನ್ನು ಶೇ ೨೫ ರಷ್ಟು ಕಾಯ್ದಿರಿಸಿ ಸಹಕಾರಿಯ ಬೆಳವಣಿಗೆಗೆ ಪ್ರಯತ್ನಿಸುವುದರಿಂದ ಸದಸ್ಯರಿಗೆ ಶೇ ೧೦ ರಷ್ಟು ಲಾಭಾಂಶ ವಿತರಿಸಲಾಗುತ್ತಿದೆ ಎಂದು ತಿಳಿಸಿದ ಅವರು ಸಹಕಾರಿಯು ೧೫೦೬ ಸದಸ್ಯರನ್ನು ಹೊಂದಿದ್ದು ೧ ಕೋಟಿ ೩೫ ಲಕ್ಷ ಶೇಅರ ಬಂಡವಾಳ, ೬.೪೮ ಕೋಟಿ ಠೇವು,೧೭ ಕೋಟಿ ೩೪ ಲಕ್ಷ ದುಡಿಯುವ ಬಂಡವಾಳ,೧೦ ಕೋಟಿ ೬೪ ಲಕ್ಷ ಸಾಲ ವಿತರಿಸಿಸಿ ೩೬.೧೭ ಲಕ್ಷ ರೂಗಳ ನಿವ್ವಳ ಲಾಭ ಗಳಿಸಿದೆ ಎಂದರು.

ಉಪಾಧ್ಯಕ್ಷ ದತ್ತಾತ್ರೇಯ ಬಿದರೆ,ನಿರ್ದೇಶಕರಾದ ಡಿ.ಬಿ.ಪೂಜಾರಿ, ಜ್ಞಾನೇಶ್ವರ ಮಾಂಗೂರೆ,ಶಿವಾಜಿ ಶಿಂಗಾಯಿ,ಎ.ಬಿ.ಪಟೇಲ್, ರಮೇಶ ಕುಂಭಾರ,ದುAಡಪ್ಪ ಮಜಲಟ್ಟಿ
ಇಮಾಮಹುಸೇನ್ ಪಟೇಲ್, ,ಶೈಲಜಾ ಮುಗಳಿ, ಶಿವಲೀಲಾ ಜಗದೀಶ ಮಗದುಮ್, ಹಾಗೂ ಮಹಾಂತೇಶ ಭಾತೆ,ವಿಜಯ ಕೋಟಿವಾಲೆ, ರಮೇಶ ಕುಂಬಾರ, ಗ್ರಾ ಪಂ ಅಧ್ಯಕ್ಷ ಪಂಚಾಕ್ಷರಿ ಹಳಿಜೋಳೆ, ಬಾಳು ಮುಗಳಿ ಸೇರಿದಂತೆ ಸದಸ್ಯರು ಉಪಸ್ಥರಿದ್ದರು.

ಸಹಕಾರಿಯ ಮುಖ್ಯಕಾರ್ಯನಿರ್ವಾಹಕ ಎಸ್.ಬಿ.ಸೊಲ್ಲಾಪೂರೆ ಆರ್ಥಿಕ ವರ್ಷದ ವರದಿ ಮಂಡಿಸಿದರು. ಬಸವರಾಜ ಮಡಿವಾಳ ಸ್ವಾಗತಿಸಿದರು,ಸಾವಿತ್ರಿ ಜೇಧೆ ನಿರೂಪಿಸಿದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!