ಹೂವಿನ ಹಿಪ್ಪರಗಿ: ವಿಜಯಪುರ ಜಿಲ್ಲೆ ಹೂವಿನ ಹಿಪ್ಪರಗಿ ಗ್ರಾಮದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರಿಗೆ ಅವಮಾನ ಮಾಡಿದಕ್ಕೆ ದಲಿತ ಸಂಘರ್ಷ ಸಮೀತಿ. (ರಿ) ಗ್ರಾಮ ಘಟಕ ಹೂವಿನ ಹಿಪ್ಪರಿಗೆ ವತಿಯಿಂದ ಬಸವನ ಬಾಗೇವಾಡಿ ತಾಲೂಕಾ ತಹಶಿಲ್ದಾರ ರವರಿಗೆ ಮನವಿ ದೂರು ಸಲ್ಲಿಸಿದರು.
ದಿನಾಂಕ ಜನೇವರಿ ೨೬, ೨೦೨೫ ರಂದು ಭಾರತಾದಂತ್ಯ ೭೬ನೇ ಗಣರಾಜ್ಯೋತ್ಸವ ಆಚರಿಸಿದರು, ಹೀಗೆ ಹೂವಿನಿ ಹಿಪ್ಪರಗಿ ಗ್ರಾಮ ಪಂಚಾಯತಿಯಲ್ಲಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಗ್ರಾಮ ಪಂಚಾಯತಿ P.D.O ಅವರು ಡಾ|| ಬಿ.ಆರ್. ಅಂಬೇಡ್ಕರ ಮೂರ್ತಿಗೆ ಮಾಲಾರ್ಪಣೆ ಮಾಡದೆ ಅವರಿಗೆ ಅವಮಾನ ಮಾಡಿದ ಅಧಿಕಾರಿಯನ್ನು ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕೆಂದು ದಲಿತ ಸಂಘರ್ಷ ಸಮೀತಿ (ರಿ) ಯವರು ಬಸವನ ಬಾಗೇವಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲಿ ಉಮೇಶ ನಡುವಿನಮನಿ, ವೆಂಕಟೇಶ ದೊಡಮನಿ, ಸಿದ್ದು ಮೇಟಿ, ಪಿ. ಜೆ. ಪೂಜಾರಿ ಹಾಗೂ ದಲಿತ ಸಂಘರ್ಷ ಸಮಿತ ಸದಸ್ಯರು ಹಾಗೂ ಜನ ಸಾಮಾನ್ಯರು ಉಪಸ್ತಿತರಿದ್ದರು.