Ad imageAd image

ಗ್ರಾಂ,ಪಂ ಪಿಡಿಓ ನಿರ್ಲಕ್ಷ್ಯ, ಗಬ್ಬೆದ್ದು ನಾರುತ್ತಿವೆ.ಎಲ್ಲಿ ನೋಡಿದ್ದಲ್ಲಿ ಕಸದ ರಾಶಿಗಳು.

Bharath Vaibhav
ಗ್ರಾಂ,ಪಂ ಪಿಡಿಓ ನಿರ್ಲಕ್ಷ್ಯ, ಗಬ್ಬೆದ್ದು ನಾರುತ್ತಿವೆ.ಎಲ್ಲಿ ನೋಡಿದ್ದಲ್ಲಿ ಕಸದ ರಾಶಿಗಳು.
WhatsApp Group Join Now
Telegram Group Join Now

ಚಿಕ್ಕೋಡಿ:-ಅಥಣಿ ಅಧಿಕಾರಗಳ ಬೇಜವಾಬ್ದಾರಿತನದಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಅಲೆದಾಡುವ ಪರಿಸ್ಥಿತಿ ಅಥಣಿ ತಾಲೂಕಿನ ಚಮಕೇರಿ ಮಡ್ಡಿಯಲ್ಲಿ ಎದುರಾಗಿದೆ.

ಅಸ್ವಚ್ಛತೆಯ ಕಾರಣ ಸೊಳ್ಳೆಗಳ ಕಾಟದಿಂದ ಹಲವು ರೋಗಗಳು ಹರಡುವ ಭೀತಿಯಲ್ಲಿ ಜನರು ಕಾಲ ಕಳೆಯುವಂತಾಗಿದೆ. ಇಲ್ಲಿ ಗ್ರಾಂ ಪಂ ಜನಪ್ರತಿನಿದಿನಗಳು ಹಾಗೂ ಪಿಡಿಓ ಸಾಹೇಬರ ಆಟಾಟೊಪಕ್ಕೆ ನಮಗೂ ಸ್ವಚ್ಛತೇಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಿರ್ಲಕ್ಷ ಧೋರಣೆಗೆ ಜನರು ಹೈರಾಣಾಗಿದ್ದಾರೆ.ಡೆಂಗ್ಯೂ ಪ್ರಕರಣಗಳು ದಿನದ ದಿನಕ್ಕೆ ಹೆಚ್ಚು ಆಗ್ತಾ ಇದ್ರೂ ಸಹ‌ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.


ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ‌ ಆವರಣ ಪಕ್ಕದಲ್ಲಿ ಕಸದ ರಾಶಿ ತುಂಬಿದರು ಸಹ‌ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ.ಕಸದ ರಾಶಿ ಕ್ಲೀನ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಸ್ಥಳೀಯರು ಗ್ರಾಂ ಪಂ ಅಧಿಕಾರಿಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.ಇಂತಹ ಸುದ್ದಿಗಳನ್ನಾದ್ರೂ ಗಮನಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತೆ ವಹಿಸಿ ಗ್ರಾಮದಲ್ಲಿ ಸ್ವಚ್ಛತೆಗೆ ಮುಂದಾಗ್ತಾರಾ ಕಾದು ನೋಡಬೇಕಿದೆ.ಬೈಟ್ ಸಂಗಮೇಶ್ ಪಲ್ಲಕ್ಕಿ.

ವರದಿ;- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!