ಚಿಂಚೋಳಿ:ಮಾ.11ರಂದು ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಶ್ರೀ ಬಸವಲಿಂಗ ಅವಧೂತ ಆಶ್ರಮ ವತಿಯಿಂದ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರ,14,ನೇ ಜಾತ್ರಾಮಹೋತ್ಸವ ಮತ್ತು ಜಗನ್ಮಾತೆ ಅಕ್ಕಮಹಾದೇವಿ ತೊಟ್ಟಿಲು ಸಮಾರಂಭ ಈ ಕಾರ್ಯಕ್ರಮವು ಅದ್ದೂರಿಯಾಗಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ.ಬಸವಲಿಂಗ ಅವಧೂತರು ಹಾಗೂ ಶ್ರೀ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ ಹುಲಸೂರು ಶ್ರೀಗಳಾದ ಡಾ.ಶಿವಾನಂದ್ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.

ಉದ್ಘಾಟಕರಾಗಿ ಆಗಮಿಸಿದ ಬೀದರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಎಸ್ ಬಿರಾದರ್ ಹಾಗೂ ಅತಿಥಿಗಳಾಗಿ ಆಗಮಿಸಿದ ಶ್ರೀ.ರಾಮಚಂದ್ರ ಗಣಪುರ್ ಪ್ರಾಧ್ಯಾಪಕರು ಬೀದರ್ ವಿಶ್ವವಿದ್ಯಾಲಯ ಬೀದರ್ ಹಾಗೂ ಆಂಧ್ರ ಮಹಾರಾಷ್ಟ್ರ ಕರ್ನಾಟಕ ತಮಿಳುನಾಡು ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಅಕ್ಕಮಹಾದೇವಿ ತೊಟ್ಟಿಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ :ಸುನಿಲ್ ಸಲಗರ




